ಕಾನಹೊಸಹಳ್ಳಿ ಸಮೀಪದ ಲೋಕಿಕೆರೆಯಲ್ಲಿ ಅಂಗನವಾಡಿ ಕೇಂದ್ರವನ್ನು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಉದ್ಘಾಟಿಸಿದರು. ಅಂಗನವಾಡಿ ಶಿಕ್ಷಕಿ ಸರಸ್ವತಿ, ಪ್ರಮುಖರಾದ ಲಕ್ಕಜ್ಜಿ ಮಲ್ಲಿಕಾರ್ಜುನ, ಹುಡೇಂ ಪಾಪನಾಯಕ, ಜಿ.ಓಬಣ್ಣ, ಬಿ.ಇ.ಜಗದೀಶ್ ನಾಗೇಶ್ ರೆಡ್ಡಿ ಇದ್ದರು. 
ಜಿಲ್ಲೆ

ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಅಗತ್ಯ

ಗಾಯತ್ರಿ ಮಾಲಿಪಾಟೀಲ್

ಕಾನಹೊಸಹಳ್ಳಿ: ಶಿಕ್ಷಣ ಕ್ಷೇತ್ರಕ್ಕೆ ಬುನಾದಿಯಾಗಿರುವ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರವನ್ನು ಕಲಿಸಬೇಕು. ಅಲ್ಲದೆ, ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ವಿತರಿಸಬೇಕು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಸಮೀಪದ ಲೋಕಿಕೆರೆ ಗ್ರಾಮದಲ್ಲಿ ಶುಕ್ರವಾರ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಪ್ರಮುಖರಾದ ಲಕ್ಕಜ್ಜಿ ಮಲ್ಲಿಕಾರ್ಜುನ, ವಲಸೆ ಪಾಪಯ್ಯ, ಮೇಕೆ ಚಂದ್ರಪ್ಪ, ಹುಡೇಂ ಪಾಪನಾಯಕ, ನಾಗೇಶ ರೆಡ್ಡಿ, ಸೋಮನಗೌಡ, ಶ್ರೀನಿವಾಸ ರೆಡ್ಡಿ, ಜಿ.ಓಬಣ್ಣ, ಹನುಮಜ್ಜ, ಕಲ್ಲಹಳ್ಳಿ ಕೆ.ಟಿ.ರಾಜಣ್ಣ, ಬಿ.ಇ.ಜಗದೀಶ್, ದುರುಗಪ್ಪ, ತರಕಾರಿ ದುರುಗಪ್ಪ, ಅಂಜಿನಪ್ಪ, ಇಮಡಾಪುರ ಕೆಂಚಪ್ಪ, ಅಂಗನಾಡಿ ಕಾರ್ಯಕರ್ತೆ ಸರಸ್ವತಿ ಇತರರಿದ್ದರು.

ಇದಕ್ಕೂ ಮುನ್ನ ಗ್ರಾಮದ ಎಸ್ಸಿ ಕಾಲನಿಯಲ್ಲಿ 35 ಲಕ್ಷ ರೂ.ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೂಮಿಪೂಜೆ ನೆರವೇರಿಸಿದರು.