ಸುಳ್ಯ: ಮಕ್ಕಳು ಅತಿಯಾಗಿ ಮೊಬೈಲ್ ಬಳಸದೆ ಅಗತ್ಯಕ್ಕನುಗುಣವಾಗಿ ಉಪಯೋಗಿಸಿದರೆ ನಿರ್ಧರಿತ ಗುರಿ ಮುಟ್ಟಲು ಸಾಧ್ಯ ಎಂದು ಸುಳ್ಯ ಜೆಎಂಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಬಿ.ಮೋಹನ್‌ಬಾಬು ಅಭಿಪ್ರಾಯಪಟ್ಟರು.
ಶುಕ್ರವಾರ ನಗರದ ಮಲ್ನಾಡ್ ಶಾಲೆಯಲ್ಲಿ ಪೋಕ್ಸೋ ಮತ್ತು ಮೋಟಾರು ವಾಹನ ಕಾಯ್ದೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಎಂ.ಯೋಗಿತಾ ಗೋಪಿನಾಥ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸುಳ್ಯ ವಕೀಲರ ಸಂಘದ ಉಪಾಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು, ಸಹಾಯಕ ಸರ್ಕಾರಿ ಅಭಿಯೋಜಕ ರಮೇಶ್ ಅರ್, ಸುಳ್ಯ ಇನ್ನರ್‌ವೀಲ್ ಅಧ್ಯಕ್ಷೆ ಚಿಂತನಾ ಸುಬ್ರಹ್ಮಣ್ಯ, ಗೌಡ ಸೋಶಿಯಲ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಪಿ.ಎಸ್.ಗಂಗಾಧರ್, ಶಾಲಾ ಸಂಚಾಲಕ ದೊಡಣ್ಣ ಬರೆಮೇಲು, ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.