ಕಂಪ್ಲಿಯಲ್ಲಿ ಮಕ್ಕಳ ಮಾಸಿಕಪತ್ರಿಕೆಯನ್ನು ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ ಬಿಡುಗಡೆಗೊಳಿಸಿದರು. ಸಂಪಾದಕ ಪರಶುರಾಮ್ ಪವಾರ್, ಮಕ್ಕಳಾದ ಚಿನ್ಮಯ್, ಚಿರಾಗ್, ವಿನುತಾ, ಅಮೋಘವರ್ಷ ಸೊಪ್ಪಿಮಠ ಇದ್ದಾರೆ. 
ಜಿಲ್ಲೆ

ಬಾಲ್ಯದಲ್ಲಿಯೇ ಸಾಹಿತ್ಯಾಸಕ್ತಿ ಮೂಡಿಸಿ

Kopala - Desk - Eraveni

ಕಂಪ್ಲಿ: ಮಕ್ಕಳಿಗೆ ಬಾಲ್ಯದಲ್ಲಿಯೇ ಸಾಹಿತ್ಯಾಸಕ್ತಿ ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ ಹೇಳಿದರು.

ಪಟ್ಟಣದ ಟಿಎಲ್‌ಸಿ ಕೇಂದ್ರದಲ್ಲಿ, ಮಕ್ಕಳ ಸಾಹಿತ್ಯ ಪರಿಷತ್ ತಾಲೂಕು ಘಟಕ ಹಮ್ಮಿಕೊಂಡಿದ್ದ ಕಂಪು ಮಕ್ಕಳ ಮಾಸಿಕಪತ್ರಿಕೆಯನ್ನು ಬಿಡುಗಡೆಗೊಳಿಸಿ ಶನಿವಾರ ಮಾತನಾಡಿದರು.

ಮಕ್ಕಳಲ್ಲಿ ಸಚ್ಚಾರಿತ್ರೃ, ಮಾನವೀಯತೆ, ಸಂಸ್ಕಾರ, ನಾಡಪ್ರೇಮವನ್ನು ಜಾಗೃತಿಗೊಳಿಸಲು ಶಿಕ್ಷಕರು ಮುಂದಾಗಬೇಕು. ಸಾಹಿತ್ಯ ಪ್ರತಿಭೆಯನ್ನು ಗುರುತಿಸಿ ಸೂಕ್ತ ವೇದಿಕೆ ಒದಗಿಸುವಲ್ಲಿ ಸಂಪಾದಕ ಮಂಡಳಿ ಬದ್ಧತೆತೋರಬೇಕು ಎಂದರು.

ವಾಸವಿ ಅನುದಾನಿತ ಕನ್ನಡ ಮಾಧ್ಯಮ ಶಾಲೆ ಮುಖ್ಯಶಿಕ್ಷಕ ರಾಜು ಬಿಲಂಕರ್ ಮಾತನಾಡಿ, ಮಕ್ಕಳು ಕವಿತೆ, ಕಥೆ, ಚಿತ್ರಗಳನ್ನು ರಚಿಸುವ ಮೂಲಕ ಕ್ರಿಯಾಶೀಲವಾಗಿ ಪಾಲ್ಗೊಂಡಿದ್ದಾರೆ. ಬರಹ ಕೌಶಲ ಅರಿವು ಉಂಟು ಮಾಡಲು ಮಕ್ಕಳ ಸಾಹಿತ್ಯಿಕ ಕಮ್ಮಟ ಆಯೋಜಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಕ್ಕಳ ಮಾಸಿಕಪತ್ರಿಕೆ ಸಂಪಾದಕ ಪರಶುರಾಮ್ ಪವಾರ್, ಟಿಎಲ್‌ಸಿ ಸಂಪನ್ಮೂಲವ್ಯಕ್ತಿ ರಾಘವೇಂದ್ರ, ಪರಿಷತ್ ಕಾರ್ಯದರ್ಶಿ ಚಂದ್ರಯ್ಯ ಸೊಪ್ಪಿಮಠ, ಪದಾಧಿಕಾರಿಗಳಾದ ಆದೀಶ ಜವಳಿ, ನಿರಂಜನಮೂರ್ತಿ, ಶಂಕರಮೂರ್ತಿ, ನಾಗರಾಜ, ಸರ್ವೇಶ್, ಲತಾ, ಗುರುಬಸಮ್ಮ, ಸಿಆರ್‌ಪಿಗಳಾದ ರೇಣುಕಾರಾಧ್ಯ, ಹನುಮಂತಪ್ಪ, ಮುಖ್ಯಶಿಕ್ಷಕರಾದ ದೊಡ್ಡಬಸಪ್ಪ, ರೇವಣ್ಣ, ಮಂಜುನಾಥ ಇತರರಿದ್ದರು.