ಜಿಲ್ಲೆ

ಬಾಲ್ಯ ವಿವಾಹಗಳನ್ನು ತಡೆಗಟ್ಟಿ

ರಾಯಚೂರು: ಬಡತನ, ಅನಕ್ಷರತೆ ಸೇರಿ ವಿವಿಧ ಕಾರಣಗಳಿಂದ ಬಾಲ್ಯ ವಿವಾಹ ಹೆಚ್ಚಳವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಅನಿಷ್ಟ ಪದ್ದತಿಯನ್ನು ತಡೆಗಟ್ಟಲು ಸಮಾಜದ ಸಹಕಾರ ಅಗತ್ಯ ಎಂದು ಸಮಗ್ರ ಶಿಕ್ಷಣ ಇಲಾಖೆ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಡಾ.ಆರ್.ಇಂದಿರಾ ಹೇಳಿದರು.

ಮಕ್ಕಳು ಮತ್ತು ಮಹಿಳೆಯರ ಬಲವರ್ಧನೆಗೆ ಕಾರ್ಯಾಗಾರ ಅನುಕೂಲ

ನಗರದಲ್ಲಿ ಕ್ರೈ ಸಂಸ್ಥೆ ಹಾಗೂ ಶೃತಿ ಸಂಸ್ಕೃತಿ ಸಂಸ್ಥೆ ಆಯೋಜಿಸಿದ್ದ ಹದಿಹರಿಯದ ಹೆಣ್ಣು ಮಕ್ಕಳ ಶಿಕ್ಷಣ ಸವಾಲುಗಳು ಒಂದು ದಿನದ ಸಮಾಲೋಚನೆ ಕಾರ್ಯಾಗಾರ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಮಕ್ಕಳು ಮತ್ತು ಮಹಿಳೆಯರ ಬಲವರ್ಧನೆಗೆ ಕಾರ್ಯಾಗಾರ ಅನುಕೂಲವಾಗಲಿದೆ ಎಂದರು.
ಬಾಲ್ಯ ವಿವಾಹಗಳನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ ಉತ್ತಮ ಅಡಿಪಾಯ ಹಾಕಬೇಕು. ಮಕ್ಕಳನ್ನು ಉನ್ನತ ವ್ಯಾಸಾಂಗದವರೆಗೆ ಪ್ರೋತ್ಸಾಹಿಸುವ ಕೆಲಸ ಪಾಲಕರು ಮಾಡಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್.ಚೇತನ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುರೇಂದ್ರಬಾಬು, ಅಂಬಣ್ಣ ಆರೋಲಿಕರ್, ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನ್ ಆರಾಧ್ಯ, ಚಂದ್ರಶೇಖರ್ ರೆಡ್ಡಿ, ಮೈನುಲ್