ಜಿಲ್ಲೆ

ನೀರು ಎಂದು ತಿಳಿದು ಟರ್ಪಂಟೈನ್ ಕುಡಿದ ಮಗು!

chandru

ಬೆಳಗಾವಿ: ಗೋಡೆಗೆ ಹಚ್ಚುವ ಬಣ್ಣಕ್ಕೆ ಬೆರೆಸಲು ತೆಗೆದಿಟ್ಟಿದ್ದ ಟರ್ಪಂಟೈನ್ ಎಣ್ಣೆಯನ್ನು ಕುಡಿದು ಒಂದೂವರೆ ವರ್ಷದ ಮಗು ಮೃತಪಟ್ಟಿದೆ. ತಾಲೂಕಿನ ಬಾಳೆಕುಂದ್ರಿ ಬಿ.ಕೆ. ಗ್ರಾಮದಲ್ಲಿ ಶನಿವಾರ ಈ ದಾರುಣ ಘಟನೆ ನಡೆದಿದೆ. ಗ್ರಾಮದ ರೀಧಾ ಇಮ್ರಾನ್ ಜಮಾದಾರ ಎಂಬ ಹೆಣ್ಣು ಮಗುವೇ ಮೃತಪಟ್ಟ ನತದೃಷ್ಟೆ.

ಆಕೆಯ ಪಾಲಕರು ಗೋಡೆಗೆ ಹಚ್ಚುವ ಆಯಿಲ್ ಪೇಂಟನ್ನು ತಂದು ಎತ್ತಿನ ಗಾಡಿಗೆ ಹಚ್ಚುವಲ್ಲಿ ತಲ್ಲೀನರಾಗಿದ್ದರು. ಟರ್ಪಂಟೈನ್ ಎಣ್ಣೆಯನ್ನು ಅದರಲ್ಲಿ ಮಿಕ್ಸ್ ಮಾಡುವ ಉದ್ದೇಶದಿಂದ ತಂದಿಟ್ಟುಕೊಂಡಿದ್ದರು. ಅದರ ಮುಚ್ಚಳ ತೆರೆದೇ ಇತ್ತು.

ಆಟವಾಡುತ್ತ ಮನೆಯಿಂದ ಹೊರಗೆ ಬಂದ ಮಗು, ಅದನ್ನು ನೀರಿನ ಬಾಟಲಿ ಎಂದು ತಿಳಿದು ಬಣ್ಣದ ಡಬ್ಬಿಯ ಬದಿಗಿದ್ದ ಟರ್ಪಂಟೈನ್‌ಅನ್ನು ಕುಡಿಯಿತು.

ಕೆಲವೇ ನಿಮಿಷಗಳಲ್ಲಿ ಇದನ್ನು ನೋಡಿದ ಪಾಲಕರು ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರು ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗಲಿಲ್ಲ.