ಜಿಲ್ಲೆ

ಡಾ.ವಿಜಯ ಸಂಕೇಶ್ವರ ಅವರಿಗೆ ಚೇತನಶ್ರೀ ಪ್ರಶಸ್ತಿ

arunakunigal

ಹುಬ್ಬಳ್ಳಿ: ದ್ಯಾವಪ್ಪನವರ- ಕೊರವಿ- ಸಿದ್ನಾಳ ಎಜುಕೇಶನ್ ಟ್ರಸ್ಟ್​ನ ಚೇತನ ಸಮೂಹ ಸಂಸ್ಥೆ ವತಿಯಿಂದ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಅವರಿಗೆ 'ಚೇತನಶ್ರೀ ಪ್ರಶಸ್ತಿ' ಪ್ರದಾನ ಮಾಡಿ ಗೌರವಿಸಲಾಯಿತು.

ಉಣಕಲ್​ನ ಚೇತನ ಸಮೂಹ ಸಂಸ್ಥೆಗಳ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ‌ ಶುಕ್ರವಾರ ಡಾ.ವಿಜಯ ಸಂಕೇಶ್ವರ ಅವರಿಗೆ ಚೇತನಶ್ರೀ ಪ್ರಶಸ್ತಿ ನೀಡಿ ಸಂಸ್ಥೆಯು ಸನ್ಮಾನಿಸಿತು. ಇದನ್ನೂ ಓದಿರಿ ಕೆಮ್ಮು-ಜ್ವರಕ್ಕೆ ಚಿಕಿತ್ಸೆ ಪಡೆಯಲು ಹೋದ ಮಂಗಳೂರು ಬಾಲಕನ ಶ್ವಾಸಕೋಶದಲ್ಲಿ ಗುಂಡುಸೂಜಿ ಪತ್ತೆ!

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪದ್ಮಶ್ರೀ ಡಾ.ವಿಜಯ ಸಂಕೇಶ್ವರ, ಚೇತನ ಪಬ್ಲಿಕ್ ಸ್ಕೂಲ್ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದೆ. ಸಂಸ್ಥೆಯ ವತಿಯಿಂದ ನನಗೆ ಸನ್ಮಾನಿಸಿ ಗೌರವಿಸಿದ್ದಕ್ಕಾಗಿ ಅಭಿನಂದನೆಗಳು. ಇದೇ ಸಂಸ್ಥೆಯಿಂದ ಕಲಿತು ಉದ್ಯಮ ಕ್ಷೇತ್ರದಲ್ಲಿ ತಮ್ಮನ್ನ ತೊಡಗಿಸಿಕೊಂಡವರಿಗೆ ಸನ್ಮಾನ, ಗೌರವ ಸಲ್ಲಿಸಬೇಕು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಉತ್ತಮ ಪ್ರೋತ್ಸಾಹ ದೊರೆಯಲಿದೆ ಎಂದರು.

ಸಮಯ ಮತ್ತು ವೇಗ ಅನ್ನುವುದು ಜೀವನದಲ್ಲಿ ತುಂಬಾ ಮುಖ್ಯ. ನನ್ನ ವೃತ್ತಿ ಜೀವನದಲ್ಲಿ ಇಂದಿಗೂ ನಾನು ಒಂದೇಒಂದು ದಿನ ರಜೆ ತೆಗೆದುಕೊಂಡಿಲ್ಲ. ವೃತ್ತಿ ಜೀವನದ ಬಗ್ಗೆ ಅಭಿಮಾನ, ಗೌರವ ಮುಖ್ಯ. ಯಾವುದೇ ವೃತ್ತಿ ಆಗಿರಲಿ ಸಮಯ ಹಾಗೂ ವೇಗದ ಶಿಸ್ತು ಇದ್ದಲ್ಲಿ ಸಾಧನೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಯಾವುದೇ ಉದ್ಯಮದಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು. ನೇರವಾಗಿ ವಹಿವಾಟು ಮಾಡಿದರೆ ಉದ್ಯಮ‌ ಪ್ರಗತಿ ಕಾಣಲಿದೆ. ಯಾವುದೇ ಉದ್ಯಮ ಆರಂಭಿಸಿದರೂ ಸ್ವಂತ, ಸ್ವಾವಲಂಬಿಯಾಗಿ ಉದ್ಯಮ‌ ಆರಂಭಿಸಬೇಕು. ಆಗ ಮಾತ್ರ ಉತ್ತಮ‌ ದೇಶ ನಿರ್ಮಾಣ ಸಾಧ್ಯ. ನಮ್ಮ ದೇಶದಲ್ಲಿ ಅನೇಕ ಸದಾವಕಾಶಗಳಿವೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಾಧನೆ ದಾರಿಯಲ್ಲಿ‌ ಸಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರದ ಸಿಇಒ ಅಶೋಕ‌ ದಳವಾಯಿ, ಸಂಸ್ಥೆಯ ನಿರ್ದೇಶಕ ಡಾ. ವಿ.ಎಂ. ಕೊರವಿ, ಚೇತನ ಬಿಸಿನೆಸ್ ಸ್ಕೂಲ್​ನ ಪ್ರೊಫೆಸರ್ ಎಮಿರಿಟಸ್ ಡಾ.ಅಶೋಕ ಚಚಡಿ, ಡಾ. ರಮಾಕಾಂತ ಕುಲಕರ್ಣಿ, ಪ್ರೊ. ಎಂ.ಬಿ.ಹೂಲಿ, ಡಾ. ಬಿ.ಸಿ.ಮೃತ್ಯುಂಜಯ ಮತ್ತಿತತರರು ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ.ಅಶೋಕ ವಡಕಣ್ಣವರ್ ಸ್ವಾಗತಿಸಿದರು.