ಜಿಲ್ಲೆ

ಒಂದಾಗಿರೋಣ ಅನ್ನೋ ಸಂದೇಶ ಸಾರಿದ ರಾಬರ್ಟ್ ದೋಸ್ತಿ: ಇನ್ನೆರೆಡು ದಿನಗಳಲ್ಲಿ ಕಮಿಷರನ್​ ಭೇಟಿಗೆ ಸಿದ್ಧತೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ದರ್ಶನ್​ ಹೆಸರಲ್ಲಿ 25 ಕೋಟಿ ರೂ. ವಂಚನೆ ಯತ್ನ ಪ್ರಕರಣಕ್ಕೆ ನಟ ದರ್ಶನ್ ಮತ್ತು ಉಮಾಪತಿ ತಿಲಾಂಜಲಿ ಹಾಡಿದ್ದಾರೆ. ಒಂದಾಗಿದ್ದೇವೆ ಮುಂದೆಯೂ ಒಂದಾಗಿರೋಣ ಅನ್ನೊ ಸಂದೇಶವನ್ನು ರಾಬರ್ಟ್ ದೋಸ್ತಿ ಸಾರಿದೆ.

ಇಬ್ಬರು ಒಟ್ಟಿಗೆ ಸೇರಿ ಕ್ಯಾಮೆರಾಗೆ ಪೋಸ್​​ ನೀಡುವ ಮೂಲಕ ವಿವಾದಕ್ಕೆ ರಾಬರ್ಟ್​ ದೋಸ್ತಿ ತೆರೆ ಎಳೆದಿದೆ. ಅಲ್ಲದೆ, ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಉಮಾಪತಿ ನಿರಾಕರಿಸಿದ್ದಾರೆ.

ಈ ವಿಚಾರವನ್ನು ಇಲ್ಲಿಗೆ ನಿಲ್ಲಿಸೋಣ ನಿರ್ಮಾಪಕರೆ, ಈ ವಿಷಯದ ಬಗ್ಗೆ ನಾವು ಮಾತನಾಡೋದು ಬೇಡ ಎಂದು ದರ್ಶನ್ ಅವರು ಹೇಳಿದ್ದಾರೆ. ಆರೋಪಿ ಅರುಣಾ ಕುಮಾರಿ ಬೇಕಾದ್ರೆ ಮಾತಾಡಲಿ, ಪೊಲೀಸ್ ಶೈಲಿಯಲ್ಲಿ ತನಿಖೆ ಆದ್ರೆ ಸತ್ಯಾಂಶ ಹೊರಬರಲಿದೆ ಎಂದರು.

ಈ ಪ್ರಕರಣಕ್ಕೆ ಸಂಹರಿಸಿದ ದಾಖಲೆಗಳ ಬಗ್ಗೆ ಕಾಯ್ತಿದ್ದೀವಿ. ದಾಖಲೆ ಸಿಕ್ಕ ತಕ್ಷಣ ದರ್ಶನ್ ಸರ್ ನಾನು ಇಬ್ಬರು ಪ್ರೆಸ್ ಮೀಟ್​ ಮಾಡಿ ಮಾಹಿತಿ ನೀಡ್ತಿವಿ. ಇನ್ನೆರಡು ದಿನಗಳಲ್ಲಿ ದರ್ಶನ್ ಸರ್ ಮತ್ತು ನಾನು ಕಮಿಷನ್ ಅವರ ಭೇಟಿ ಮಾಡ್ತೀವಿ ಎಂದು ಉಮಾಪತಿ ಮಾಹಿತಿ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)