ಕಾನಹೊಸಹಳ್ಳಿ ಸಮೀಪದ ಹಾರಕಬಾವಿ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ದೇವಿ ರಥೋತ್ಸವ ಅದ್ದೂರಿಯಾಗಿ ನೆರವೇರಿತು. 
ಜಿಲ್ಲೆ

ಚೌಡೇಶ್ವರಿ ದೇವಿ ರಥೋತ್ಸವ ಅದ್ದೂರಿ

ಕಾನಹೊಸಹಳ್ಳಿ: ಹಾರಕಬಾವಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಚೌಡೇಶ್ವರಿ ದೇವಿ ರಥೋತ್ಸವ ಅದ್ದೂರಿಯಾಗಿ ಜರುಗಿತು.

ದೇವಸ್ಥಾನದಲ್ಲಿ ಬೆಳಗ್ಗೆ ವಿವಿಧ ಪೂಜಾ ಕಾರ್ಯಕ್ರಮ ನಡೆದವು. ಸಂಜೆ 4ಗಂಟೆಗೆ ದೇವಸ್ಥಾನದಿಂದ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಜನಪದ ವಾದ್ಯಮೇಳದೊಂದಿಗೆ ಮೆರವಣಿಗೆ ಮೂಲಕ ರಥದ ಬಳಿಗೆ ಕರೆತರಲಾಯಿತು. ನಂತರ ದೇವಿಯ ಉತ್ಸವಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವ ನೆರವೇರಿಸಲಾಯಿತು. ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ಚೂರುಮೆಣಸು ಎಸೆದು ಜಯಘೋಷ ಕೂಗಿ ಭಕ್ತಿ ಸಮರ್ಪಿಸಿದರು. ನಂದಿಧ್ವಜ ಕುಣಿತ, ಸಮಾಳ ಸೇರಿ ವಿವಿಧ ಜಾನಪದ ವಾದ್ಯಗಳು ಗಮನ ಸೆಳೆದವು. ಪಟ, ಹೂವಿನ ಹರಾಜಿನಲ್ಲಿ ದೇವಿಯ ಮುಕ್ತಿ ಬಾವುಟವನ್ನು ಹಾರಕಬಾವಿ ಗ್ರಾಪಂ ಅಧ್ಯಕ್ಷೆ ಬಸಮ್ಮ ಮಂಜುನಾಥ ಅವರು ಎರಡು ಲಕ್ಷ ರೂ.ಗೆ ಪಡೆದರು. ಪೊಲೀಸ್ ಬಿಗಿಬಂದೋಬಸ್ತ್ ಒದಗಿಸಲಾಗಿತ್ತು. ಮಾಜಿ ಸಚಿವ ಬಿ.ಶ್ರೀರಾಮುಲು, ಕಾಂಗ್ರೆಸ್ ಮುಖಂಡ ಎನ್.ಟಿ.ತಮ್ಮಣ್ಣ ಇತರರಿದ್ದರು.