

ಹಗರಿಬೊಮ್ಮನಹಳ್ಳಿ: ನಂದಿಪುರದ ದೊಡ್ಡಬಸವೇಶ್ವರ ಸ್ವಾಮಿ 41ನೇ ರಥೋತ್ಸವ ಶುಕ್ರವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ನಂದಿಪುರ ಕ್ಷೇತ್ರದ ಡಾ.ಮಹೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ರಥೋತ್ಸವದಲ್ಲಿ, ಉತ್ತಂಗಿ ಸೋಮಶಂಕರ ಸ್ವಾಮೀಜಿ, ಕೊಟ್ಟೂರು ಚಾನುಕೋಟಿ ಸಿದ್ದಲಿಂಗ ಸ್ವಾಮೀಜಿ, ಗದ್ದಿಕೆರೆಯ ಚರಂತೇಶ್ವರ ಸ್ವಾಮೀಜಿ, ಆಂಧ್ರದ ಹೊಸಹಳ್ಳಿಯ ಶಂಭುಲಿಂಗ ಸ್ವಾಮೀಜಿ, ಕ್ಯಾರಕಟ್ಟಿ ಅಜ್ಜಯ್ಯ, ಮುಷ್ಠೂರು ನಾಗಲಿಂಗ ಸ್ವಾಮೀಜಿ, ಬೆಣ್ಣಿಹಳ್ಳಿ ಪಂಚಾಕ್ಷರಿ ಸ್ವಾಮೀಜಿ, ಸಂಡೂರಿನ ಎರ್ರಿಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಬೆಂಗಳೂರಿನ ಕಡಲಬಾಳು ಕೆ.ಕೊಟ್ರೇಶ 3.75ಲಕ್ಷ ರೂ.ಗೆ ಪಟಾಕ್ಷಿ ಪಡೆದರು.