ಜಿಲ್ಲೆ

ಗುರುಪೀಠದ ಪುನಃನಿರ್ಮಾಣ ಕಾರ್ಯ ಶ್ಲಾಘನೀಯ : ಮಧೂರಿನಲ್ಲಿ ಆನೆಗುಂದಿ ಶ್ರೀ ಮೆಚ್ಚುಗೆ

ಸೌಮ್ಯ ಆರ್

ಕಾಸರಗೋಡು: ಆನೆಗುಂದಿ ಗುರುಪೀಠದ ಪುನಃನಿರ್ಮಾಣಕ್ಕಾಗಿ ಸಮಾಜ ಬಾಂಧವರ ಸಕ್ರಿಯ ಸಹಭಾಗಿತ್ವದ ಜತೆಗೆ ಮಧೂರಿನ ಬಾಂಧವರು ಮುಂಚೂಣಿಯಲ್ಲಿದ್ದು ನಡೆಸಿರುವ ಕೆಲಸ ಶ್ಲಾನೀಯ ಎಂದು ಆನೆಗುಂದಿ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದ್ದಾರೆ.

21ನೇ ಚಾತುರ್ಮಾಸ್ಯ ವ್ರತಾಚರಣೆ ಪೂರ್ವಭಾವಿ ಕ್ಷೇತ್ರ ಸಂದರ್ಶನ ಅಂಗವಾಗಿ ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ಶಿಷ್ಯರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವಚನ ನೀಡಿದರು.

ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ.ಆಚಾರ್ ಕಂಬಾರು, ಪದಾಧಿಕಾರಿಗಳಾದ ಜನಾರ್ದನ ಆಚಾರ್ಯ ಕನ್ಯಾನ, ನಿವೃತ್ತ ಸುಬೇಧಾರ್ ವೈ., ಧರ್ಮೇಂದ್ರ ಆಚಾರ್ಯ ಪರಕ್ಕಿಲ, ಗಣೇಶ್ ಆಚಾರ್ಯ ಕೆಮ್ಮಣ್ಣು, ಗುರುರಾಜ ಕೆ.ಜೆ.ಆಚಾರ್ಯ ಮಂಗಳೂರು, ಜನಾರ್ದನ ಆಚಾರ್ಯ ಬಜಕೂಡ್ಲು, ಬಿ.ವ್ನಿೇಶ್ ಆಚಾರ್ಯ ಕಾಸರಗೋಡು, ದಯಾನಂದ ಆಚಾರ್ಯ ಕೆಳಾರ್ಕಳಬೆಟ್ಟು ಮೊದಲಾದವರಿದ್ದರು.

ಮಧೂರು ಶ್ರೀ ಕಾಳಿಕಾಂಬಾ ಮಠಕ್ಕೆ ಆಗಮಿಸಿದ ಆನೆಗುಂದಿ ಶ್ರೀಗಳನ್ನು ಆಡಳಿತ ಸಮಿತಿ ಅಧ್ಯಕ್ಷ ಕೆ.ಪ್ರಭಾಕರ ಆಚಾರ್ಯ ಕೋಟೆಕಾರು ಸ್ವಾಗತಿಸಿದರು. ವಕೀಲ ಕೆ.ಎಂ.ಗಂಗಾಧರ ಆಚಾರ್ಯ ಕೊಂಡೆವೂರು ಪ್ರಸ್ತಾವನೆಗೈದರು. ಉಪಾಧ್ಯಕ್ಷ ಕೆ.ಎಂ.ಜಗದೀಶ ಆಚಾರ್ಯ ನಿರೂಪಿಸಿದರು. ಕಾರ್ಯದರ್ಶಿ ಎಂ.ತಾರಾನಾಥ ಆಚಾರ್ಯ ವಂದಿಸಿದರು.