ಬೈಂದೂರು ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಂಘದ ಪ್ರಧಾನ ಕಚೇರಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ರ‌್ಯಾಂಕ್ ಪಡೆದ ಕೌಸ್ತುಭ ಅವರನ್ನು ಸನ್ಮಾನಿಸಲಾಯಿತು. 
ಜಿಲ್ಲೆ

ಬದಲಾವಣೆ ಜಗದ ನಿಯಮ

ವಿಜಯವಾಣಿ ಸುದ್ದಿಜಾಲ ಬೈಂದೂರು
ಇತ್ತೀಚಿನ ದಿನಗಳಲ್ಲಿ ದೇಶದ ಹೆಚ್ಚಿನ ಎಲ್ಲ ಕ್ಷೇತ್ರಗಳು ಕಲುಶಿತವಾಗಿ ಮೌಲ್ಯ ಕಳೆದುಕೊಳ್ಳುತ್ತಿವೆ. ಹೆಚ್ಚಿನವರಲ್ಲಿ ತಾಳ್ಮೆ ಕಡಿಮೆಯಾಗುತ್ತಿದ್ದು, ಧಾವಂತದ ಮನೋಭಾವ ಹೆಚ್ಚಾಗಿದೆ. ಸಕಾರಾತ್ಮಕ ಆಲೋಚಿಸುವ ಮನಸುಗಳು ಅಪರೂಪವಾಗಿದೆ. ಶೈಕ್ಷಣಿಕವಾಗಿ ಜ್ಞಾನವಂತರಾಗಿ ದೇಶದ ಆಸ್ತಿಯಾಗಬೇಕಿರುವ ವಿದ್ಯಾರ್ಥಿಗಳು ಇತ್ತೀಚೆಗೆ ಸಾಧಿಸುವ ಮನಸ್ಥಿತಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ರಾಜೇಂದ್ರ ನಾಯಕ್ ಹೇಳಿದರು.

ಬೈಂದೂರು ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಂಘ ಪ್ರಧಾನ ಕಬೈಂದೂರು ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಂಘದ ಪ್ರಧಾನ ಕಚೇರಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ರ‌್ಯಾಂಕ್ ಪಡೆದ ಕೌಸ್ತುಭ ಅವರನ್ನು ಸನ್ಮಾನಿಸಲಾಯಿತು.ರಿಯಲ್ಲಿ ಸಂಘ ವತಿಯಿಂದ ಕೊಡಮಾಡಿದ ಸಂಘದ ಸದಸ್ಯರ 56 ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು. ಬದಲಾವಣೆ ಅನ್ನುವುದು ಜಗದ ನಿಯಮ. ಬದಲಾವಣೆಗಳಿಗೆ ಒಗ್ಗಿಕೊಂಡು ಮುನ್ನಡೆಯಬೇಕಿದೆ. ನಮ್ಮ ಬದುಕಿಗೆ ಗುರಿ ಇರಬೇಕು. ಸಾಧನೆಯ ಬದುಕು ನಮ್ಮದಾಗಬೇಕಾದರೆ ನಮ್ಮಲ್ಲಿ ತಾಳ್ಮೆ ಇರಬೇಕು. ಇನ್ನೊಬ್ಬರ ಸಾಧನೆ ನಮಗೆ ಪ್ರೇರಣೆಯಾಗಬೇಕೇ ಹೊರತು ಸ್ಪರ್ಧೆಯಾಗಬಾರದು ಎಂದರು.

ಸಂಘ ಅಧ್ಯಕ್ಷ ಎಸ್.ರಾಜು ಪೂಜಾರಿ ಸ್ವಾಗತಿಸಿದರು. ನಾಡಾ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಚಿಕ್ಮರಿ, ಲೆಕ್ಕ ಪರಿಶೋಧಕ ಪ್ರದೀಪ್ ಪೂಜಾರಿ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ರ‌್ಯಾಂಕ್ ಪಡೆದ ಕೌಸ್ತುಭ, ಏಳನೇ ರ‌್ಯಾಂಕ್ ಪಡೆದ ಸುಶಾನ್ ನಾರಾಯಣ ಬಿಲ್ಲವ ಅವರನ್ನು ಸನ್ಮಾನಿಸಲಾಯಿತು.

ಉದ್ಯಮಿ ಜಗನ್ನಾಥ ಶೆಟ್ಟಿ, ಉದ್ಯಾವರ ಎಸ್‌ಡಿಎಂ ಆರ್ಯುವೇದ ಕಾಲೇಜು ಅಧೀಕ್ಷಕ ಡಾ.ನಾಗರಾಜ ಪೂಜಾರಿ, ಉಪಾಧ್ಯಕ್ಷ ಎಂ. ವಿನಾಯಕ ರಾವ್, ನಿರ್ದೇಶಕರಾದ ಸೀತಾರಾಮ ಮಡಿವಾಳ, ರಾಮಕೃಷ್ಣ ಖಾರ್ವಿ, ಮಂಜು ಪೂಜಾರಿ, ಮಂಜುನಾಥ ಪೂಜಾರಿ, ಸಿಇಒ ಕೆ.ಕಿಟ್ಟಣ್ಣ ರೈ ಇದ್ದರು. ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.