ಜಿಲ್ಲೆ

ಗ್ರೀನ್​ ಜೋನ್​ ಪಟ್ಟ ಕಳೆದುಕೊಂಡಿತು ಚಾಮರಾಜನಗರ: ಮಹಾರಾಷ್ಟ್ರದಿಂದ ಬಂದ ವಿದ್ಯಾರ್ಥಿಗೆ ಸೋಂಕು ದೃಢ

vinaymk1969

ಚಾಮರಾಜನಗರ: ಮಹಾರಾಷ್ಟ್ರದಿಂದ ಹನೂರು ತಾಲೂಕಿನ ಮಾರ್ಟಳ್ಳಿಗೆ ಆಗಮಿಸಿದ್ದ 22 ವರ್ಷ ವಯಸ್ಸಿನ ಯುವಕನಿಗೆ ಕರೊನಾ ಸೋಂಕು ಧೃಡಪಟ್ಟಿರುವುದಾಗಿ ತಿಳಿದುಬಂದಿದ್ದು, ಇದನ್ನು ಜಿಲ್ಲಾಡಳಿತ ಖಚಿತ ಪಡಿಸಿದೆ.

ವಿದ್ಯಾರ್ಥಿಗೆ ಕರೊನಾ ಸೋಂಕು ಧೃಡಪಟ್ಟಿರುವ ಕುರಿತು ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ಅಧಿಕೃತ ಮಾಹಿತಿ ದೊರೆಯಲಿದೆ. ಮಹಾರಾಷ್ಟ್ರದಿಂದ ಬಂದಿದ್ದ ವಿದ್ಯಾರ್ಥಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ‌‌ |ಡಾ.ಎಂ.ಸಿ.ರವಿ,                          ಜಿಲ್ಲಾ ಆರೋಗ್ಯಾಧಿಕಾರಿ

ಪುಣೆಯಲ್ಲಿ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದ ಯುವಕ ಹನೂರಿಗೆ ಮರಳಿದ್ದನ್ನು ಪತ್ತೆ ಮಾಡಿ ಮೊರಾರ್ಜಿ‌ ದೇಸಾಯಿ ಕಾಲೇಜಿನಲ್ಲಿ ತೆರೆಯಲಾಗಿದ್ದ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು.ಈತನಿಗೆ ಕರೊನಾ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ.

ಚಾಮರಾಜನಗರ ಸೇಫ್ ಎಂದು ಬಂದ: ಪುಣೆಯಲ್ಲಿ ಮೆಡಿಕಲ್ ಓದುತ್ತಿದ್ದ ವಿದ್ಯಾರ್ಥಿ ರಾಜ್ಯದ ಏಕೈಕ ಜಿಲ್ಲೆಯಾಗಿದ್ದ ಕರೊನಾ ಮುಕ್ತ ಜಿಲ್ಲೆ ಚಾಮರಾಜನಗರ ಸೇಫ್‌ ಎಂದು ಇಲ್ಲಿಗೆ ಬಂದಿದ್ದ. ಹನೂರು ತಾಲೂಕಿನ ಪಾಲಿಮೇಡು ಗ್ರಾಮದಲ್ಲಿರುವ ತಾಯಿ ಮನೆಗೆ ವಿದ್ಯಾರ್ಥಿ ಪುಣೆಯಿಂದ ಶ್ರಮಿಕ ರೈಲಿನ ಮೂಲಕ ಬೆಂಗಳೂರಿಗೆ ಆಗಮಿಸಿದ. ಬೆಂಗಳೂರಿನಿಂದ ತನ್ನ ಮಾವನ ಜತೆ ಕಾರಿನಲ್ಲಿ ಹನೂರಿಗೆ ಬಂದಿದ್ದ ಎನ್ನಲಾಗಿದೆ.

ವಿದ್ಯಾರ್ಥಿ ಮಾವನ ಗಂಟಲು ದ್ರವ ಪರೀಕ್ಷೆಗೆ ರವಾನೆ‌ ಮಾಡಲಾಗಿದೆ.‌ವಿದ್ಯಾರ್ಥಿ ಜತೆ ಪ್ರಾಥಮಿಕ ಸಂಕರ್ಪ ಹೊಂದಿದೆ ೭ ಜನ ಚಾಮರಾಜನಗರದಲ್ಲಿ ಕ್ವಾರೈಂಟನ್‌ ಗೊಳಪಡಿಸಲಾಗಿದೆ. ತಾಯಿ ಮತ್ತು ತಮ್ಮನ ವರದಿ ನೆಗೆಟಿವ್ ಬಂದಿದೆ ಎಂದು‌‌‌ ತಿಳಿದುಬಂದಿದೆ.