More

    71 ಲಕ್ಷ ದಾಟಿತು ಕೋವಿಡ್ 19 ಕೇಸ್​: 4 ಲಕ್ಷ ದಾಟಿತು ಮರಣ ಪ್ರಮಾಣ..

    ನವದೆಹಲಿ: ಜಾಗತಿಕವಾಗಿ ಕರೊನಾ ಕೋವಿಡ್ 19 ವೈರಸ್ ಸೋಂಕು ಪೀಡಿತರ ಪ್ರಮಾಣ 71 ಲಕ್ಷದ ಗಡಿದಾಟಿದ್ದು, ಮರಣ ಪ್ರಮಾಣ 4 ಲಕ್ಷದ ಗಡಿ ದಾಟಿದೆ. ಇದುವರೆಗೆ 35,32,160 ಜನ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎನ್ನುತ್ತಿದೆ ವಲ್ಡೋಮೀಟರ್​ ಡೇಟಾ.

    ಜಾಗತಿಕವಾಗಿ ಅತಿ ಹೆಚ್ಚಿನ ಸಂಕಷ್ಟಕ್ಕೆ ಒಳಗಾದ ದೇಶವಾಗಿ ಅಮೆರಿಕ ಮುಂದುವರಿದಿದ್ದು, ಇದುವರೆಗೆ ಅಲ್ಲಿ ಸೋಂಕಿಗೆ ಒಳಗಾದವರ ಸಂಖ್ಯೆ 20,26,493 ಮತ್ತು 1,13,055 ಜನ ಮೃತಪಟ್ಟಿದ್ದಾರೆ. ಇದರ ಬೆನ್ನಿಗೆ ಬ್ರೆಜಿಲ್​ ಇದ್ದು, ಇಲ್ಲಿ 7,10,887 ಕೇಸ್​ಗಳು ಪತ್ತೆಯಾಗಿದ್ದು, ಇದರಲ್ಲಿ 37,312 ಮರಣ ಪ್ರಮಾಣ. ಇನ್ನು ರಷ್ಯಾ ಮೂರನೇ ಸ್ಥಾನದಲ್ಲಿದ್ದು 4,76,658 ಕೇಸ್​ಗಳಲ್ಲಿ 5,971 ಮರಣ ಪ್ರಮಾಣ. ಜೂನ್​ ನಾಲ್ಕರಂದು ಕೇಸ್​ಗಳ ವಿಚಾರ ಘೋಷಿಸಿದ ನಂತರ ಗ್ರೀಸ್​ನಲ್ಲಿ 97 ಕೇಸ್​ಗಳ ದೃಢಪಟ್ಟಿದ್ದು, ಸೋಮವಾರ ಒಟ್ಟು ಕೇಸ್​ಗಳ ಸಂಖ್ಯೆ 3,049 ಆಗಿದೆ. ಇದರಲ್ಲಿ ಸಾವಿನ ಪ್ರಮಾಣ 182 ಆಗಿದೆ.

    ಇದನ್ನು ಓದಿದ್ದೀರಾ?ಸುದ್ದಿ ಸಮಗ್ರ: ದೆಹಲಿ ಕಂಪನ ಜನರಲ್ಲಿ ನಡುಕ

    ಕಳೆದ 24 ಗಂಟೆಗಳ ಅವಧಿಯಲ್ಲಿ ಇಟಲಿಯಲ್ಲಿ ಹೊಸದಾಗಿ 280 ಕೇಸ್​ಗಳು ಸೇರ್ಪಡೆಯಾಗಿದೆ. ಇದರಲ್ಲಿ ಮೂರನೇ ಒಂದು ಭಾಗದಷ್ಟು ಕೇಸ್​ ಲೊಂಬಾರ್ಡಿಯಲ್ಲೇ ಪತ್ತೆಯಾಗಿದೆ. ಇದರೊಂದಿಗೆ ಇಟಲಿಯ ಒಟ್ಟು ಕೇಸ್​ಗಳ ಸಂಖ್ಯೆ 2,35,278ಕ್ಕೆ ತಲುಪಿದೆ. ಸಾವಿನ ಸಂಖ್ಯೆ 33,964 ಆಗಿದೆ. (ಏಜೆನ್ಸೀಸ್)

    ಧನ್ವಂತರಿ: ಆಡಂಬರಕ್ಕಷ್ಟೇ ಅಲ್ಲದ ರತ್ನಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts