ಜಿಲ್ಲೆ

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಓರ್ವ ಅಧಿಕ ಪ್ರಸಂಗಿ: ಶಾಸಕ ಎನ್​. ಮಹೇಶ್​ ವಾಗ್ದಾಳಿ

ಚಾಮರಾಜನಗರ: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಓರ್ವ ಅಧಿಕ ಪ್ರಸಂಗಿ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ವಾಗ್ದಾಳಿ ನಡೆಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎನ್​.ಮಹೇಶ್, ಕೋವಿಡ್ ಸಂಕಷ್ಟದಲ್ಲಿ ಇಬ್ಬರು ಅಧಿಕಾರಿಗಳ ಕೆಸರೆರಚಾಟ ಸರಿಯಲ್ಲ. ಅದರಲ್ಲೂ ಮಾಧ್ಯಮದ ಮೂಲಕ ಕಚ್ಚಾಟದಲ್ಲಿ ತೊಡಗಿರುವುದು ದುರಾದೃಷ್ಟಕರ ಎಂದು ಟೀಕಿಸಿದರು.

ಡಿಸಿಗೆ ಹೆದರಿ ಪಾಲಿಕೆ ಆಯುಕ್ತೆ ಶಿಲ್ಪ ನಾಗ್ ರಾಜೀನಾಮೆ ಯಾಕೆ ಕೊಡಬೇಕು? ಆಕ್ಸಿಜನ್ ದುರಂತದ ಸಮಯದಲ್ಲಿ ಚಾಮರಾಜನಗರದ ಜನತೆ ಕ್ಷಮೆ ಕೇಳಬೇಕು ಎಂದು ಅಸಂಬದ್ಧ ಹೇಳಿಕೆ ನೀಡಿದ್ದರು. ಕ್ಷಮೆ ಕೇಳಲು ಇವರೇನು ಮೈಸೂರು ಮಹರಾಜರಾ? ಸರ್ಕಾರ ಈ ಇಬ್ಬರು ಅಧಿಕಾರಿಗಳನ್ನು ನಿಯಂತ್ರಣದಲ್ಲಿಡ ಬೇಕು ಎಂದರು.

ಇಬ್ಬರು ಅಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಬುದ್ಧಿವಾದ ಹೇಳಬೇಕು ಎಂದು ಚಾಮರಾಜನಗರದಲ್ಲಿ ಶಾಸಕ ಎನ್.ಮಹೇಶ್ ಹೇಳಿಕೆ ನೀಡಿದರು. (ದಿಗ್ವಿಜಯ ನ್ಯೂಸ್​)