ಜಿಲ್ಲೆ

ಕರೊನಾ ಲಸಿಕೆ ಪಡೆಯಲು ಆರೋಗ್ಯ ಸಿಬ್ಬಂದಿ ಹಿಂದೇಟು: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

ಚಾಮರಾಜನಗರ: ಕರೊನಾ ಲಸಿಕೆ ಪಡೆದ ನಂತರ ಮದ್ಯಪಾನ ಸೇವಿಸಬಾರದೆಂಬ ತಜ್ಞರ ಸಲಹೆ ಹಿನ್ನಲೆಯಲ್ಲಿ ಶೇಕಡ 40ಕ್ಕು ಹೆಚ್ಚು ಆರೋಗ್ಯ ಸಿಬ್ಬಂದಿ ಲಸಿಕೆ ಪಡೆಯುಲು ಹಿಂಜರಿಯುತ್ತಿದ್ದಾರೆ.

ಲಸಿಕೆ ಪಡೆದರೆ ಮದ್ಯಪಾನದಿಂದ ವಂಚಿತರಾಗಬೇಕಾಗುತ್ತದೆ ಎಂದು ಸಿಬ್ಬಂದಿ ದೂರ ಉಳಿದರೇ ಎಂಬ ಪ್ರಶ್ನೆ ಕೇಳಿಬಂದಿದೆ. 20 ದಿನ ಕಳೆದರು ಸರ್ಕಾರಿ ಆರೋಗ್ಯ ವಲಯದ ಸಿಬ್ಬಂದಿ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ.

ಜನವರಿ 16ರಿಂದಲೇ ಕೋವಿಡ್​ ಲಸಿಕಾ ಅಭಿಯಾನ ಆರಂಭವಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಕೇವಲ ಶೇ. 58 ರಷ್ಟು ಮಾತ್ರ ಗುರಿ ಸಾಧನೆಯಾಗಿದೆ. ಮೊದಲ ಹಂತದ ನಿಗದಿತ ಗುರಿ 4853 ( ಸರ್ಕಾರಿ ವಲಯ).ಆದರೆ, ಇಂದಿನವರೆಗೆ ಲಸಿಕೆ ಪಡೆದವರ ಸಂಖ್ಯೆ ಕೇವಲ 2826.

ಹೀಗಿರುವಾಗ ಆರೋಗ್ಯಾಧಿಕಾರಿಗಳು ಹೇಳುವುದೇ ಬೇರೆ. ಹೊಸ ಲಸಿಕೆ ಆಗಿರುವುದರಿಂದ ಆತಂಕ ಸಹಜ. ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರು ಮುಂದೆ ಬರುತ್ತಿಲ್ಲ. ಅವರ ಅನುಮಾನಗಳನ್ನು ಪರಿಹರಿಸಿ ಇನ್ನು ಮೂರು ದಿನಗಳಲ್ಲಿ ಗುರಿ ಸಾಧಿಸುತ್ತೇವೆ. ಇಂದಿನಿಂದ ಖಾಸಗಿ ಆರೋಗ್ಯ ಸಂಸ್ಥೆಗಳ ಸಿಬ್ಬಂದಿಗೆ ಲಸಿಕೆ ಹಾಕುವ ಕಾರ್ಯಕ್ರಮ ಆರಂಭಿಸುತ್ತೇವೆ ಎಂದು ಚಾಮರಾಜನಗರ ಡಿಎಚ್ಓ ಡಾ.ಎಂಸಿ ರವಿ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)