More

    ಮನೆಗೆ ಬಂದ ಮಹಾಲಕ್ಷ್ಮೀ… ಕಳೆದ 30 ವರ್ಷ ಎಲ್ಲಿದ್ದರು? ನಟಿ ಬಾಯ್ಬಿಟ್ಟ ಎಕ್ಸ್​ಕ್ಲೂಸಿವ್ ಮಾಹಿತಿ ಇಲ್ಲಿದೆ

    | ಮಂಜು ಕೊಟಗುಣಸಿ ಬೆಂಗಳೂರು
    80ರ ದಶಕದಲ್ಲಿ ‘ಬಡ್ಡಿ ಬಂಗಾರಮ್ಮ’, ‘ಜಯಸಿಂಹ’, ‘ಪರಶುರಾಮ’, ‘ಭದ್ರಕಾಳಿ’ ಸೇರಿ ಕನ್ನಡದಲ್ಲಿ 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಮಹಾಲಕ್ಷ್ಮೀ, 90ರ ದಶಕದ ಆರಂಭದಲ್ಲಿ ಚಿತ್ರರಂಗಕ್ಕೆ ಗುಡ್​ಬೈ ಹೇಳಿದರು. ಅಲ್ಲಿಂದ ಕಳೆದ ವರ್ಷದವರೆಗೂ ಚಿತ್ರರಂಗದಿಂದ ಅವರು ದೂರವೇ ಇದ್ದರು. ಅದೊಂದು ದಿನ ಇದ್ದಕ್ಕಿದ್ದಂತೆ ಕಾಣಿಸಿಕೊಂಡು, ಚಿತ್ರರಂಗಕ್ಕೆ ಮರಳುವ ಆಸೆ ವ್ಯಕ್ತಪಡಿಸಿದ್ದರು. ಅವಕಾಶ ಸಿಕ್ಕರೆ ಮತ್ತೆ ಬಣ್ಣ ಹಚ್ಚುವುದಾಗಿ ಹೇಳಿದ್ದರು. ಈಗ ಅಂಥದ್ದೊಂದು ಅವಕಾಶ ಸಿಕ್ಕಿದ್ದು, ‘ಟಿಆರ್​ಪಿ ರಾಮ’ ಎಂಬ ಹೊಸ ಚಿತ್ರದಲ್ಲಿ ಮಹಾಲಕ್ಷ್ಮೀ ಬಣ್ಣ ಹಚ್ಚಿದ್ದಾರೆ. ಗುರುವಾರ ಈ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಈ ಸಂದರ್ಭದಲ್ಲಿ ‘ವಿಜಯವಾಣಿ’ಯ ಜತೆಗೆ ಎಕ್ಸ್​ಕ್ಲೂಸಿವ್ ಆಗಿ ಹಲವು ವಿಷಯಗಳ ಕುರಿತಾಗಿ ಮುಕ್ತವಾಗಿ ಮಾತನಾಡಿದ್ದಾರೆ.

    ನನ್ನ ಕುಟುಂಬದ ಸಲುವಾಗಿ ಎಕ್ಸಿಟ್ ಆದೆ: ಒಬ್ಬ ನಟಿಯಾಗಿ ಹೇಗೆ ಶೇ. 100ರಷ್ಟು ಶ್ರಮವಹಿಸಿದೆನೋ, ಅದೇ ರೀತಿ ವೈಯಕ್ತಿಕ ಜೀವನಕ್ಕೂ ನಾನು ನ್ಯಾಯ ಸಲ್ಲಿಸಬೇಕಿತ್ತು. ನನಗೆ ನನ್ನದೇ ಆದ ಜೀವನ ಇದೆ. ಕೌಟುಂಬಿಕ ಜೀವನಕ್ಕೂ ಸಮಯ ನೀಡಬೇಕಿತ್ತು. ಹಾಗಾಗಿ ಚಿತ್ರರಂಗದಿಂದ ದೂರ ಉಳಿಯುವ ನಿರ್ಧಾರ ಮಾಡಿದೆ.

    ಸನ್ಯಾಸಿನಿ ವದಂತಿಗಳೆಲ್ಲ ಶುದ್ಧ ಸುಳ್ಳು: ನಾನು ಒಬ್ಬ ಗೃಹಿಣಿ. ನನಗೆ ಮದುವೆಯಾಗಿದೆ. ಹೀಗಿರುವಾಗ, ಮಹಾಲಕ್ಷ್ಮೀ ಸನ್ಯಾಸಿ ಆಗಿದ್ದಾಳೆ ಎಂಬ ಸುದ್ದಿ ಹರಿದಾಡಿತ್ತು. ಅದೆಲ್ಲವೂ ಶುದ್ಧ ಸುಳ್ಳು. ಕುಟುಂಬದೊಟ್ಟಿಗೆ ಸಮಯ ಕಳೆಯಲು ಸಮಯ ಸಿಕ್ಕಿತು. ಜತೆಗೆ ಚರ್ಚ್​ಗೆ ಹೋಗಿ ಸೇವೆ ಮಾಡಿದೆ. ಅದನ್ನೇ ಜನ ಬೇರೆ ರೀತಿಯಲ್ಲಿ ಕಲ್ಪಿಸಿಕೊಂಡರು. ಚರ್ಚ್​ಗೆ ಹೋಗುವುದಕ್ಕೆ ಕಾರಣ, ಆಧ್ಯಾತ್ಮ! ಮೊದಲಿಂದಲೂ ನನಗೆ ಆಧ್ಯಾತ್ಮದ ಕಡೆ ಸೆಳೆತ. ಅದೂ ನನ್ನ ಜೀವನದ ಭಾಗವಾಗಿದೆ.

    ಮನೆಗೆ ಬಂದ ಮಹಾಲಕ್ಷ್ಮೀ... ಕಳೆದ 30 ವರ್ಷ ಎಲ್ಲಿದ್ದರು? ನಟಿ ಬಾಯ್ಬಿಟ್ಟ ಎಕ್ಸ್​ಕ್ಲೂಸಿವ್ ಮಾಹಿತಿ ಇಲ್ಲಿದೆ30 ವರ್ಷ ಅನಿಸುತ್ತಿಲ್ಲ, ನಿನ್ನೆ ಮೊನ್ನೆ ನಟಿಸಿದಂತಿದೆ …
    ನಿಜಕ್ಕೂ ನಾನು ಸಿನಿಮಾದಿಂದ ದೂರ ಉಳಿದು 30 ವರ್ಷ ಆಯಿತು ಎಂದು ಅನಿಸುತ್ತಲೇ ಇಲ್ಲ. ಕಳೆದ ವರ್ಷ, ಕಳೆದ ವಾರ ನಟಿಸಿದಂತೆ ಭಾಸವಾಗುತ್ತಿದೆ. ಕೊಟ್ಟ ಪಾತ್ರಕ್ಕೆ ಜೀವತುಂಬುವುದು ನಮ್ಮ ಕೆಲಸ. ಅದನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ.

    ಬದಲಾವಣೆಗೆ ಹೊಂದಿಕೊಳ್ಳುವ ನಂಬಿಕೆಯಿದೆ
    ಅಶುತೋಷ್ ಪಿಕ್ಚರ್ಸ್ ಬ್ಯಾನರ್​ನಲ್ಲಿ ತಯಾರಾಗುತ್ತಿರುವ ‘ಟಿಆರ್​ಪಿ ರಾಮ’ ಚಿತ್ರದಲ್ಲಿ ಮಹಾಲಕ್ಷ್ಮೀ ಅವರದ್ದು ತಾಯಿಯ ಪಾತ್ರ. ಪಾತ್ರದಲ್ಲಿನ ಗಟ್ಟಿತನವನ್ನು ನೋಡಿಯೇ ಈ ಸಿನಿಮಾ ಸೂಕ್ತ ಎಂದು ಆಯ್ದುಕೊಂಡರಂತೆ ಮಹಾಲಕ್ಷ್ಮೀ. ‘ನಾನು ಮತ್ತೆ ನಟಿಸಬೇಕು ಎಂದು ಯೋಚಿಸುವುದಕ್ಕೂ, ಈ ಕಥೆ ಸಿಗುವುದಕ್ಕೂ ಸರಿ ಹೋಯಿತು. ‘ಟಿಆರ್​ಪಿ ರಾಮ’ ಚಿತ್ರದಲ್ಲಿ ನಾನು ಕಥಾನಾಯಕನ ತಾಯಿ. ನೋಡುಗರನ್ನು ಹಿಡಿದಿಡುವ ಪಾತ್ರ. ನಟನೆಗೆ ಒಳ್ಳೆಯ ಅವಕಾಶವಿದೆ ಎಂಬ ಕಾರಣಕ್ಕೆ ಈ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ. ಇದೆಲ್ಲವನ್ನು ಬದಿಗಿಟ್ಟರೆ, ತಾಂತ್ರಿಕವಾಗಿ ಎಲ್ಲವೂ ಬದಲಾಗಿದೆ. ಅದಕ್ಕೆ ಹೊಂದಿಕೊಂಡು ಹೋಗಬೇಕಿದೆ’ ಎನ್ನುತ್ತಾರೆ ಮಹಾಲಕ್ಷ್ಮೀ.

    ತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…

    ವಿದ್ಯಾರ್ಥಿನಿ ಜತೆ ಲೆಕ್ಚರರ್​ ಮಗನ ಕಾಮಪುರಾಣ! 3 ವರ್ಷದಿಂದ ಲವ್​-ಸೆಕ್ಸ್​-ಅಬಾರ್ಷನ್​​: ಮುಂದೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts