ಜಿಲ್ಲೆ

ಕಣ್ಣು ಕಾಣ್ಸಲ್ಲ ಎಂದು ಗ್ರಾ.ಪಂ.ಸದಸ್ಯೆ ಮತ ಹಾಕಲೂ ನೆರವು ಕೇಳಿದ್ರೆ ಚುನಾವಣಾಧಿಕಾರಿ ಹೀಗ್​ ಮಾಡೋದಾ?

ಚಾಮರಾಜನಗರ: ಚುನಾವಣಾಧಿಕಾರಿಯ ಎಡವಟ್ಟಿನಿಂದಾಗಿ ಬಿಜೆಪಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಕೈತಪ್ಪಿರುವ ಪ್ರಸಂಗ ಹನೂರು ತಾಲೂಕಿನ ಹೂಗ್ಯಂನಲ್ಲಿ ನಡೆದಿದೆ.

ಕಣ್ಣು ಕಾಣಲ್ಲ ಎಂದು ಗ್ರಾ.ಪಂ.ಸದಸ್ಯೆಯೊಬ್ಬರು ಮತ ಹಾಕಲೂ ಸಹಾಯ ಕೋರಿದ್ದರು. ಆದರೆ, ಸದಸ್ಯೆಯ ದಿಕ್ಕು ತಪ್ಪಿಸಿ ಬೇರೊಬ್ಬ ಅಭ್ಯರ್ಥಿಗೆ ಚುನಾವಣಾಧಿಕಾರಿ ಮತ ಹಾಕಿಸಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.

ಮೊನ್ನೆ ನಡೆದ ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಬಿಜೆಪಿ ಬೆಂಬಲಿತೆ ಬದಲು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿಸಿರುವ ಆರೋಪ ಚುನಾವಣಾಧಿಕಾರಿ ಸಿದ್ದಪ್ಪಾಜಿಗೌಡ ವಿರುದ್ಧ ಕೇಳಿಬಂದಿದ್ದು, ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ.

ಹೂಗ್ಯಂ ಗ್ರಾ.ಪಂ.ನಲ್ಲಿ 20 ಸ್ಥಾನವಿದ್ದು,10ರಲ್ಲಿ ಬಿಜೆಪಿ, 8ರಲ್ಲಿ ಕಾಂಗ್ರೆಸ್ ಹಾಗೂ ಒಂದು ಜೆಡಿಎಸ್ ಮತ್ತು ಒಬ್ಬರು ಪಕ್ಷೇತರರು ಆಯ್ಕೆಯಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿ ಜತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿಯಲು ಬಿಜೆಪಿ ಪ್ಲಾನ್ ಮಾಡಿತ್ತು.

ಕಣ್ಣು ಕಾಣುವುದಿಲ್ಲ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಚುನಾವಣಧಿಕಾರಿ ಬಳಿಕ ಗ್ರಾ.ಪಂ.ಸದಸ್ಯೆ ಈಶ್ವರಿ ನೆರವು ಕೇಳಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ಬದಲು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸುವಂತೆ ದಿಕ್ಕು ತಪ್ಪಿಸಿರೋ ಆರೋಪ ಎದುರಾಗಿದ್ದು, ಮತ್ತೇ ಅಧ್ಯಕ್ಷಗಾದಿಗೆ ಚುನಾವಣೆ ನಡೆಸುವಂತೆ ಡಿಸಿಗೆ ಗ್ರಾ.ಪಂ.ಸದಸ್ಯರು ಮನವಿ ಮಾಡಿದ್ದಾರೆ.

ಚುನಾವಣಾಧಿಕಾರಿಗಳು ಕಾಂಗ್ರೆಸ್ ಪರ ಕೆಲಸ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. (ಏಜೆನ್ಸೀಸ್​)