ಜಿಲ್ಲೆ

ದುಶ್ಚಟಗಳಿಗೆ ಹಣ ಹೊಂದಿಸಲಾಗದೆ ಯೂಟ್ಯೂಬ್ ನೋಡಿ ಸರಗಳ್ಳತನ..!

ರಮೇಶ್​ ಕುಮಾರ್​​ ಬಿ ಎಡಮೋಳೆ

ಚಿತ್ರದುರ್ಗ: ದುಶ್ಚಟಗಳಿಗೆ ಹಣ ಹೊಂದಿಸಲಾಗದೆ ಯೂಟ್ಯೂಬ್ ನೋಡಿ ಸರಗಳ್ಳತನಕ್ಕೆ ಇಳಿದಿದ್ದ ಮೂವರು ಸಹಿತ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಅಂದಾಜು 8.50 ಲಕ್ಷ ರೂ. ಮೌಲ್ಯದ 190 ಗ್ರಾಂ. ಚಿನ್ನದ ಸರಗಳು ಹಾಗೂ 1.50 ಲಕ್ಷ ರೂ. ಮೌಲ್ಯದ ಪಲ್ಸರ್‌ಬೈಕ್‌ನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಜಿ.ರಾಧಿಕಾ ಮಾಹಿತಿ ನೀಡಿದರು.

ಚಿತ್ರದುರ್ಗ ತಾಲೂಕು ಮುದ್ದಾಪುರ ಹೊಸಹಟ್ಟಿಯ ಉಮೇಶ, ಮುದ್ದಾಪುರದ ಉದಯ್‌ಕುಮಾರ್, ಕೀರ್ತಿ ಸರಗಳ್ಳರು, ಕದ್ದ ಮಾಲನ್ನು ಖರೀದಿಸುತ್ತಿದ್ದ ಆರೋಪದಡಿ ಉತ್ಸವಾಂಭ ಚಿನ್ನದಂಗಡಿ ಮಾಲೀಕ ವಿನಯ್, ಈತನಿಗೆ ಸಹಕರಿಸುತ್ತಿದ್ದ ಯಶವಂತ್‌ನನ್ನು ಬಂಧಿಸಲಾಗಿದೆ.

ಶಿಕ್ಷಣ ತೊರೆದು ದುಶ್ಚಟಕ್ಕೆ ಬಿದ್ದಿದ್ದ ಪ್ರತಿಷ್ಠಿತ ಕುಟುಂಬದ ಉಮೇಶ್ ಹಣಕ್ಕಾಗಿ ಸರಗಳ್ಳತನಕ್ಕೆ ಇಳಿದಿದ್ದು, ಇದಕ್ಕಾಗಿ ಆತ ಸಾಮಾಜಿಕ ಜಾಲತಣಗಳಲ್ಲಿ ಕಳವು ಮಾಡುವುದು ಹೇಗೆಂದು ಕಲಿತಿದ್ದ. ಸಹಪಾಠಿಗಳಾದ ಉದಯ್ ಕುಮಾರ್, ಕೀರ್ತಿ ಅವರೊಡಗೂಡಿ ದುಷ್ಕೃತ್ಯಕ್ಕೆ ಇಳಿದಿದ್ದ.