ಜಿಲ್ಲೆ

ಲಾಕ್‌ಡೌನ್ ಇದ್ದಾಗಲೂ ಸನ್ಮಾನ ಮಾಡಿಸಿಕೊಂಡಿದ್ದ ಪಿಎಸ್‌ಐಗೆ ಶಿಕ್ಷೆ!

chandru

ಚಡಚಣ: ಲಾಕ್‌ಡೌನ್ ನಿಯಮಗಳು ಜಾರಿಯಲ್ಲಿದ್ದರೂ ಅವುಗಳನ್ನು ಉಲ್ಲಂಸಿ ಗ್ರಾಮಸ್ಥರಿಂದ ಸನ್ಮಾನ ಮಾಡಿಸಿಕೊಂಡಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗೆ ಕೊನೆಗೂ ವರ್ಗಾವಣೆಯ ಶಿಕ್ಷೆ ದೊರೆತಿದೆ.

ಇಲ್ಲಿಗೆ ಸಮೀಪದ ದೇವರನಿಂಬರಗಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಮಾಡಿಸಿಕೊಂಡಿದ್ದಾರೆ ಎಂಬ ಆರೋಪವನ್ನು ಚಡಚಣ ಪಿಎಸ್‌ಐ ಮಹಾದೇವ ಯಲಿಗಾರ ಎದುರಿಸುತ್ತಿದ್ದರು. ಆರೋಪ ಸಾಬೀತಾಗಿರುವ ಕಾರಣ, ಅವರನ್ನು ಆನ್ ಆಫೀಸ್ ಡ್ಯೂಟಿ (ಓಓಡಿ) ಆಧಾರದ ಮೇಲೆ ವಿಜಯಪುರ ಎಸ್‌ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ಸಾರ್ವಜನಿಕರಲ್ಲಿ ಕರೊನಾ ಜಾಗೃತಿ ಮೂಡಿಸಬೇಕಾದ ಪಿಎಸ್‌ಐ ಯಲಿಗಾರ ಅವರು ಲಾಕ್‌ಡೌನ್ ನಿಯಮ ಗಾಳಿಗೆ ತೂರಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ನಾಗಠಾಣ ಶಾಸಕ ಡಾ. ದೇವಾನಂದ ಚವಾಣ್ ಅವರು ಎಸ್‌ಪಿ ಅವರಿಗೆ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.