ಜಿಲ್ಲೆ

ಸುಸ್ಥಿರ ಬದುಕಿಗೆ ನಿರಂತರ ಕಲಿಕೆ : ಡಾ.ಸತೀಶ್ ಗಟ್ಟಿ ಅಭಿಪ್ರಾಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ನಿರಂತರ ಕಲಿಕೆ ಮತ್ತು ಗಳಿಕೆಯಿಂದ ಮಾತ್ರ ಸುಸ್ಥಿರ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ ಗಟ್ಟಿ ಹೇಳಿದರು.

ಜನಶಿಕ್ಷಣ ಟ್ರಸ್ಟ್ ಸ್ಮೈಲ್ ಸ್ಕಿಲ್ ಸ್ಕೂಲ್‌ನಲ್ಲಿ 3 ತಿಂಗಳ ಜೀವನ ಕೌಶಲದೊಂದಿಗೆ ಕಂಪ್ಯೂಟರ್ ಮತ್ತು ಹೊಲಿಗೆ ವೃತ್ತಿ ಕೌಶಲ ತರಬೇತಿ ಪಡೆದ ವಿದ್ಯಾರ್ಥಿನಿಯರಿಗೆ ಬುಧವಾರ ಪ್ರಮಾಣ ಪತ್ರ ವಿತರಣೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಟ್ರಸ್ಟ್‌ನಲ್ಲಿ ನಿರುದ್ಯೋಗಿ ಯುವಜನರಿಗೆ ಜೀವನ ಕೌಶಲದೊಂದಿಗೆ ಗಾಂಧಿ ಪಾಠ, ಸಂವಿಧಾನ ಜಾಗೃತಿ, ದಿನ ಪತ್ರಿಕೆ ಓದುವ, ಯೋಗಾಭ್ಯಾಸ ಮಾಡುವ ಕಾರ್ಯಕ್ರಗಳ ಮೂಲಕ ಆತ್ಮಶಕ್ತಿ ವೃದ್ಧಿಸಿ ಸ್ವ ಉದ್ಯೋಗ ಮತ್ತು ಸಮಾಜ ಸೇವಾ ಕಾರ್ಯಕ್ಕೆ ಪ್ರೇರಣೆ ನೀಡುವ ಕಾರ್ಯ ಶ್ಲಾಘನೀಯ ಎಂದರು.

ಬಾಳೆಪುಣಿ ಜನಜೀವನ ಅಧ್ಯಕ್ಷ ರಮೇಶ ಶೇಣವ ಮಾತನಾಡಿ, ವೃತ್ತಿ ಮತ್ತು ಜೀವನ ಕೌಶಲಗಳನ್ನು ಅಳವಡಿಸಿಕೊಂಡಾಗ ಮಾತ್ರ ಗಳಿಕೆಯೊಂದಿಗೆ ಗೌರವವನ್ನೂ ಹೆಚ್ಚಿಸಿಕೊಳ್ಳಬಹುದು ಎಂದರು.

ಮಾಜಿ ಒಂಬುಡ್ಸ್‌ಮನ್ ಶೀನ ಶೆಟ್ಟಿ ಸಂವಾದ ನಿರ್ವಹಿಸಿದರು. ಶಿಕ್ಷಕಿಯರಾದ ಜನನಿ, ಪ್ರಜ್ಞಾ, ಕಾವೇರಿ ಉಪಸ್ಥಿತರಿದ್ದರು.