ಜಿಲ್ಲೆ

ದಲಿತ‌ ಸಿಎಂ‌ ಆಗ್ತೇನೆ ಅಂತ ಕನಸು ಕಾಣೋನು ಹುಚ್ಚ…!: ಅದಕ್ಕೆ ಕಾರಣವೂ ಹೇಳಿದ್ರು ಸಚಿವ ಎ.ನಾರಾಯಣಸ್ವಾಮಿ

mahalakshmihm

ಆನೇಕಲ್: ದಲಿತ ಸಿಎಂ‌ ಅನ್ನೋ ಚರ್ಚೆ ಕೇವಲ ರಾಜಕೀಯ ತೆವಲಿಗೆ ಮಾತ್ರ ಮಾಡುತ್ತಾರೆ. ನಿಜವಾಗಿಯೂ ದಲಿತ ಸಿಎಂ ಆಗುತ್ತೇನೆ ಅಂತ ಕನಸು ಕಾಣುವವನು ಹುಚ್ಚ ಎಂದು ಕೇಂದ್ರ ಸಚಿವ ಎ ನಾರಾಯಣ ಸ್ವಾಮಿ ಹೇಳಿದ್ದಾರೆ.

ಆನೇಕಲ್ಲಿನ ಸಾಯಿರಾಮ್ ಕಾಲೇಜಿನಲ್ಲಿ ನಡೆದ ಸಾಯಿರಾಮ್ ಕಾಲೇಜಿನ ಪದವಿ ಪ್ರಧಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಲಿತ ಸಿಎಂ ಯಾಕೆ ಆಗುವುದಿಲ್ಲ ಅನ್ನುವುದಕ್ಕೆ ಈ ದೇಶದಲ್ಲಿ ಬಹಳಷ್ಟು ಉದಾಹರಣೆ ಇದೆ ಎಂದರು.

ಸಂವಿಧಾನ ಬರೆದ ಡಾ. ಬಿ ಆರ್ ಅಂಬೇಡ್ಕರ್ ರವರಿಗೆ ಐದು ವರ್ಷ ಮುಂದುವರೆಯಲು ಬಿಡಲಿಲ್ಲ. ಐದು ವರ್ಷ ಮುಂದುವರೀಲಿ ಅಂತ ಅವರ ಮನೆಗೆ ಹೋಗಿ ಒಂದ್ ಕಾಫಿಯೂ ಕುಡಿದಿಲ್ಲ.ಈ ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಒಂಭತ್ತು ಬಾರಿ ಶಾಸಕರಾದರು. ಮುಖ್ಯಮಂತ್ರಿ ಇನ್ನೇನು ಆಗಬೇಕು, ಆಗಲೂ ಬೇಕು ಅಂತ ಮಾಡಲಿಲ್ಲ.

ಪರಮೇಶ್ವರವರು ಮುಖ್ಯಮಂತ್ರಿ ಆಗ್ತಾರೆ ಅಂತ ಅವರನ್ನು ಸೋಲಿಸಿದರು. ಹಾಗಾಗಿ ಕರ್ನಾಟಕದ ರಾಜಕಾರಣದಲ್ಲಿ ದಲಿತ ಮುಖ್ಯಮಂತ್ರಿ ಆಗ್ತಾನೆ ಅಂತ ಕನಸು ಕಾಣೋನು‌ ಹುಚ್ಚ ಎಂದು ಹೇಳಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ.ಸರಳತೆಗೆ ಹೆಸರಾಗಿರುವ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ.(ದಿಗ್ವಿಜಯ ನ್ಯೂಸ್​)