ಜಿಲ್ಲೆ

ಹಾರ್ದಳಿ ಶಾಲೆಯಲ್ಲಿ ಶತಮಾನೋತ್ಸವ ಸಂಭ್ರಮ

ವಿಜಯವಾಣಿ ಸುದ್ದಿಜಾಲ ಜನ್ನಾಡಿ

ಹಾರ್ದಳ್ಳಿ-ಮಂಡಳಿಯ ಸ.ಹಿ. ಪ್ರಾ ಶಾಲೆ ಶತಮಾನೋತ್ಸವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಹಳೇ ವಿದ್ಯಾರ್ಥಿ ಗಣಪ್ಪಯ್ಯ ಧ್ವಜಾರೋಹಣ ನೆರವೇರಿಸಿದರು.

ಎಸ್‌ಡಿಎಂಸಿ ಅಧ್ಯಕ್ಷೆ ಜಯಲಕ್ಷ್ಮೀ ಚೇತನ್ ಅಧ್ಯಕ್ಷತೆ ವಹಿಸಿದ್ದರು. ಹಾರ್ದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಾ ಆರ್ ಶೆಟ್ಟಿ, ಗಣೇಶ್ ಶೆಟ್ಟಿ, ಕಮಲಾ, ಹರಿಪ್ರಸಾದ್ ಶೆಟ್ಟಿ, ಸಂಜೀವ ಶೆಟ್ಟಿ, ಪತ್ರಕರ್ತ ಮಂಜುನಾಥ ಶೆಣೈ, ರಾಘವೇಂದ್ರ ಅಡಿಗ, ಪ್ರೇಮಾ ಲಕ್ಷ್ಮಣ ಕುಲಾಲ್, ಶೇಖರ ಯು., ನಾಗರಾಜ ಆಚಾರ್ಯ ಮೊದಲಾದವರು ಇದ್ದರು. ಪ್ರಕಾಶ್ ಎಸ್.ಎಂ ಸ್ವಾಗತಿಸಿದರು. ಎಚ್. ಶಂಕರ್ ಹೆಗ್ಡೆ ಪ್ರಸ್ತಾವನೆಗೈದರು. ಸಾಹಿರಾ ಬಾನು ಕಾರ್ಯಕ್ರಮ ನಿರೂಪಿಸಿದರು.

ಸಂಜೆ ಸಭಾ ಕಾರ್ಯಕ್ರಮ ನಡೆಯಿತು. ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಕುಂದಾವರ ಮೀನಾಕ್ಷಿ ಶೆಟ್ಟಿ ಹಾಗೂ ಮನೋರಮಾ ರಾವ್ ಮಾಲಾಡಿ ಉದ್ಘಾಟಿಸಿದರು. ಬಳಿಕ ಶಿಕ್ಷಕರನ್ನು, ದಾನಿಗಳನ್ನು ಸನ್ಮಾನಿಸಲಾಯಿತು. ಸ್ಮರಣ ಸಂಚಿಕೆಯನ್ನು ಉದ್ಯಮಿ ದಿನೇಶ್ ಹೆಗ್ಡೆ ಅನಾವರಣಗೊಳಿಸಿದರು. ಶಾಸಕ ಕಿರಣ್‌ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ದೀಪಾ ಆರ್.ಶೆಟ್ಟಿ, ಎಂ.ದಿನೇಶ್ ಹೆಗ್ಡೆ, ಶೈಲಕಾ ಶೆಟ್ಟಿ, ಭಾಸ್ಕರ ಶೆಟ್ಟಿ, ಸುಕನ್ಯಾ, ಗಣೇಶ್ ಕುಮಾರ್ ಶೆಟ್ಟಿ, ಎಚ್.ಶಂಕರ ಹೆಗ್ಡೆ, ಜಯಲಕ್ಷ್ಮೀ, ಅತುಲ್‌ಕುಮಾರ್, ಸುಮಂತ್ ಉಪಸ್ಥಿತರಿದ್ದರು. ಡಾ.ಗಿರೀಶ್ ಶೆಟ್ಟಿ, ಗಣೇಶ್‌ಕುಮಾರ್‌ಮ ಅನೂಪ್‌ಕುಮಾರ್ ನಿರೂಪಿಸಿದರು.