ramesh jarakiholi 
ಜಿಲ್ಲೆ

ಸಿಡಿ ಕೇಸ್​: ವಿಚಾರಣೆಗೆ ಇಂದು ರಮೇಶ್ ಜಾರಕಿಹೊಳಿ ಗೈರು, ಕಾರಣ ಇಲ್ಲಿದೆ

arunakunigal

ಬೆಳಗಾವಿ: ಸೆಕ್ಸ್​ ಸಿಡಿ ಪ್ರಕರಣ ಸಂಬಂಧ ಎಸ್​ಐಟಿ ವಿಚಾರಣೆಗೆ ಹಾಜರಾಗಬೇಕಿದ್ದ ರಮೇಶ್​ ಜಾರಕಿಹೊಳಿ ಇಂದೂ ಬರುತ್ತಿಲ್ಲ.

ಸಿಡಿ ಕೇಸ್​ನ 'ಸಂತ್ರಸ್ತ' ಯುವತಿಯನ್ನು ಹಲವು ಬಾರಿ ವಿಚಾರಣೆ ಮಾಡಿರುವ ಎಸ್​ಐಟಿ, ಜಾರಕಿಹೊಳಿಗೆ ಏ.20ರಂದು ವಿಚಾರಣೆಗೆ ಹಾಜರ್​ ಆಗುವಂತೆ ಗೋಕಾಕ್​ಗೆ ಹೋಗಿ ನೋಟಿಸ್​ ಕೊಟ್ಟಿತ್ತು.

ಇತ್ತೀಚಿಗೆ ಕರೊನಾ ಪಾಸಿಟಿವ್​ ಬಂದಿದ್ದರಿಂದ ಜಾರಕಿಹೊಳಿ ಮನೆಯಲ್ಲೇ ರೆಸ್ಟ್ ಮಾಡುತ್ತಿದ್ದಾರೆ. ಸದ್ಯ ನೆಗೆಟಿವ್​ ಎಂದು ವರದಿ ಬಂದರೂ ವಿಚಾರಣೆಗೆ ಹೋಗುತ್ತಿಲ್ಲ. ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆ ಹೊರಗಡೆ ಓಡಾಡದಂತೆ ಹಾಗೂ ದೂರದ ಊರುಗಳಿಗೆ ಪ್ರಯಾಣ ಮಾಡದಂತೆ ವೈದ್ಯರು ಸೂಚನೆ ನೀಡಿದ್ದಾರೆ. ಹಾಗಾಗಿ ರಮೇಶ್​ ಜಾರಕಿಹೊಳಿ ಬೆಳಗಾವಿ ಜಿಲ್ಲೆಯ ಗೋಕಾಕ್ ನಿವಾಸದಲ್ಲಿಯೇ ರೆಸ್ಟ್ ಮಾಡುತ್ತಿದ್ದಾರೆ.