ಕಂಪ್ಲಿ ಹೊಸ ಬಸ್‌ನಿಲ್ದಾಣ ಬಳಿ ಚರಂಡಿ ಕಾಮಗಾರಿಯನ್ನು ಬಳ್ಳಾರಿ ಲೋಕಾಯುಕ್ತ ನಿರೀಕ್ಷಕ ನಾಗರೆಡ್ಡಿ ವೀಕ್ಷಿಸಿದರು. ಮುಖ್ಯಾಧಿಕಾರಿ ಕೆ.ದುರುಗಣ್ಣ, ಜೆಇ ಮೇಘನಾ, ಪ್ರಮುಖರಾದ ಕೆ.ಲಕ್ಷ್ಮಣ, ರವಿ ಮಣ್ಣೂರು ಇತರರಿದ್ದರು. 
ಜಿಲ್ಲೆ

ಸಿಸಿ ಕ್ಯಾಮರಾ, ಬೀದಿದೀಪ ಅಳವಡಿಸಿ

Kopala - Desk - Eraveni

ಕಂಪ್ಲಿ: ಪಟ್ಟಣದಲ್ಲಿ ಬಿಡಾಡಿ ದನಗಳ ಬಗ್ಗೆ ಪಶು ವೈದ್ಯಾಧಿಕಾರಿಗಳು ನಿಗಾ ವಹಿಸಬೇಕೆಂದು ಲೋಕಾಯುಕ್ತ ನಿರೀಕ್ಷಕ ನಾಗರೆಡ್ಡಿ ತಿಳಿಸಿದರು.

ತಹಸಿಲ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು. ಕಳೆದ ಸಭೆಯಲ್ಲಿ ಸ್ವೀಕರಿಸಿದ ಐದು ಅರ್ಜಿಗಳ ಪೈಕಿ ನಾಲ್ಕು ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದೆ. ಇಂದಿನ ಸಭೆಯಲ್ಲಿ ನೀರಾವರಿ, ಆಹಾರ ಇಲಾಖೆ, ಕಂದಾಯ ಇಲಾಖೆಗೆ ಸಂಬಂಧಿಸಿದ ತಲಾ ಒಂದು ಅರ್ಜಿ ಸ್ವೀಕರಿಸಲಾಗಿದೆ.

ಐತಿಹಾಸಿಕ ಸೋಮಪ್ಪ ಕೆರೆ ಬಳಿ ಈಚೆಗೆ ಯುವಕನೊಬ್ಬ ಕೊಲೆಗೀಡಾಗಿದ್ದು, ಕೆರೆ ಪರಿಸರದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ಬೀದಿದೀಪ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯಾಧಿಕಾರಿ ಕೆ.ದುರುಗಣ್ಣಗೆ ಸೂಚಿಸಿದರು.

ನಾಲೆ ಕೊನೆಯ ಭಾಗದಲ್ಲಿ ಅಧಿಕೃತ ಸಾಗುವಳಿ ಪ್ರದೇಶಕ್ಕೆ ನೀರು ತಲುಪುತ್ತಿಲ್ಲ. ಈ ಬಗ್ಗೆ ನಿಗಾ ವಹಿಸುವಂತೆ ನೀರಾವರಿ ಅಧಿಕಾರಿಗಳಿಗೆ ಸೂಚಿಸಬೇಕೆಂದು ರೈತ ಶ್ರೀನಿವಾಸ್ ಕೋರಿದರು. ಸಣಾಪುರ ಗ್ರಾಮದ ಸರ್ವೇ ನಂಬರ್ 61ಎ4, 61ಬಿ, 60ಬಿ, 60ಎ, 59ಬಿ2ಎ 59, 50/ಬಿ2ಸಿ ಗದ್ದೆಗಳಿಗೆ ದಾರಿ ಕೊಡಿಸಬೇಕು ಎಂದು ರೈತ ಎಚ್.ಉಮೇಶ್ ಮನವಿ ಸಲ್ಲಿಸಿದರು.

ಪಟ್ಟಣದ 9, 14ಮತ್ತು 18ನೇ ವಾರ್ಡ್‌ನಲ್ಲಿ ಕೆಆರ್‌ಐಡಿಎಲ್‌ನಲ್ಲಿ ತಲಾ 50ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ ಎಂದು ಕೆ.ಲಕ್ಷ್ಮಣ, ರವಿ ಮಣ್ಣೂರು ದೂರಿದರು. ಪಡಿತರ ಅಕ್ರಮ ಮಾರಾಟ ತಡೆಯುವಂತೆ ಸಿ.ಎ.ಚನ್ನಪ್ಪ ಇತರರು ಲೋಕಾಯುಕ್ತ ನಿರೀಕ್ಷಕಗೆ ದೂರು ಸಲ್ಲಿಸಿದರು. ತಹಸೀಲ್ದಾರ್ ಜೂಗಲ ಮಂಜುನಾಯಕ, ನರೇಗಾ ಎಡಿ ಕೆ.ಎಸ್.ಮಲ್ಲನಗೌಡ, ಲೋಕಾಯುಕ್ತ ಸಿಬ್ಬಂದಿ ಹನುಮಂತಪ್ಪ, ದಾಸಪ್ಪ, ಹರೀಷ್ ಇತರರಿದ್ದರು.