ಜಿಲ್ಲೆ

ಅಕ್ರಮ ವಿದೇಶಿ ಪ್ರಜೆಗಳಿಗೆ ಸಿಸಿಬಿ ಶಾಕ್! ನಗರದಲ್ಲಿ ಭಾರೀ ರೇಯ್ಡ್​!

ಬೆಂಗಳೂರು : ವಿದೇಶಿ ಪ್ರಜೆಗಳು ಅಕ್ರಮವಾಗಿ ನೆಲೆಸಿರುವ ಬೆಂಗಳೂರು ನಗರದ ಮನೆಗಳ ಮೇಲೆ ಸಿಸಿಬಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಬೆಳ್ಳಂಬೆಳಗ್ಗೆ ಆರಂಭವಾದ ಈ ದಾಳಿ ಈ ವೇಳೆ ಏಳು ಮಂದಿ ಅಕ್ರಮ ವಾಸಿಗಳು ಪತ್ತೆಯಾಗಿದ್ದು, ಇಬ್ಬರ ಬಳಿ ಗಾಂಜಾ ಕೂಡ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ನೇತೃತ್ವದಲ್ಲಿ 6 ಎಸಿಪಿಗಳು, 20 ಇನ್ಸ್‌ಪೆಕ್ಟರ್, 100 ಮುಖ್ಯ ಪೇದೆಗಳು ಮತ್ತು ‌ಪೇದೆಗಳ ತಂಡ ದಾಳಿ ನಡೆಸಿ‌ ಮನೆ ಶೋಧ ನಡೆಸುತ್ತಿದ್ದಾರೆ.

ಹಲವರು ವೀಸಾ, ಪಾಸ್‌ಪೋರ್ಟ್ ಅವಧಿ‌ ಮುಗಿದರೂ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ಅಲ್ಲದೆ, ಡ್ರಗ್ಸ್ ದಂಧೆ, ಸೈಬರ್ ವಂಚನೆ ಪ್ರಕರಣ ಸೇರಿದಂತೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಹೆಚ್ಚಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.