ಹಳೆಯಂಗಡಿ: ಮಕ್ಕಳು ಮೊಬೈಲ್ ಬಳಕೆ ನಿಯಂತ್ರಿಸುವ ಜತೆಗೆ ಸಾವಾಜಿಕ ಜಾಲತಾಣದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಬೇಕು. ಯಾವುದೇ ರೀತಿಯ ಮೆಸೇಜ್‌ಗಳು ಬಂದರೆ ತಕ್ಷಣ ಪೊಲೀಸ್ ಠಾಣೆಗೆ ವಾಹಿತಿ ನೀಡಬೇಕು ಎಂದು ಮೂಲ್ಕಿ ಪೊಲೀಸ್ ಠಾಣೆ ಉಪ ನಿರೀಕ್ಷಕಿ ಅನಿತಾ ಹೇಳಿದರು.
ಹಳೆಯಂಗಡಿ ಪಂಚಾಯಿತಿಯ ರಾಜೀವ್‌ಗಾಂಧಿ ಸೇವಾ ಕೇಂದ್ರದ ಸಭಾಭವನದಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಕ್ಕಳಿಗೆ ಕಾನೂನು ವಾಹಿತಿ ನೀಡಿದರು.
ನಾರಾಯಣ ಸನಿಲ್ ಪ್ರೌಢಶಾಲೆಯ ವಿದ್ಯಾರ್ಥಿನಿ ಶಿಫಾನಾ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ವ್ಯಾಪ್ತಿಯ ಸಸಿಹಿತ್ಲು ಶಾಲೆಯ ಕಿಟಕಿ, ಬಾಗಿಲು ಅವ್ಯವಸ್ಥೆ, ಶೌಚಗೃಹ ದುರಸ್ತಿ ಬಗ್ಗೆ ಮಕ್ಕಳು ಗ್ರಾಮಸಭೆಯಲ್ಲಿ ಆಗ್ರಹಿಸಿದರು. ಆರೋಗ್ಯ ಇಲಾಖೆ ಅಧಿಕಾರಿಗಳು ವಾಹಿತಿ ನೀಡಿದರು.
ಹಳೆಯಂಗಡಿ ಗ್ರಾಪಂ ಅಧ್ಯಕ್ಷೆ ಪೂರ್ಣಿವಾ, ಉಪಾಧ್ಯಕ್ಷೆ ಚಂದ್ರಿಕಾ, ಸದಸ್ಯರಾದ ಅಬ್ದುಲ್ ಖಾದರ್, ಅನಿಲ್ ಪೂಜಾರಿ, ಅಬ್ದುಲ್ ಅಜೀಜ್, ವಿನೋದ್ ಕುವಾರ್ ಕೊಳುವೈಲು, ಸತೀಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.