ಹೊಸಂಗಡಿ ಗ್ರಾಮದ ಅತ್ತಿಕೊಡ್ಲು ತೇಜಪ್ಪ ಶೆಟ್ಟಿ ಎಂಬವರ ದನದ ಕೊಟ್ಟಿಗೆ, ಎರಡು ಕೋಣೆಗಳಿಗೆ ಭಾನುವಾರ ಬೆಳಿಗ್ಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂ ನಷ್ಟ ಸಂಭವಿಸಿದೆ. 
ಜಿಲ್ಲೆ

ದನದ ಕೊಟ್ಟಿಗೆಗೆ ಬೆಂಕಿ ತಗುಲಿ ನಷ್ಟ

ಸಿದ್ದಾಪುರ: ಹೊಸಂಗಡಿ ಗ್ರಾಮದ ಅತ್ತಿಕೊಡ್ಲು ತೇಜಪ್ಪ ಶೆಟ್ಟಿ ಎಂಬವರ ದನದ ಕೊಟ್ಟಿಗೆ, ಎರಡು ಕೋಣೆಗಳು ಹಾಗೂ ಕೋಣೆಗೆ ಭಾನುವಾರ ಬೆಳಗ್ಗೆ ಸಮಯ ಆಕಸ್ಮಿಕ ಬೆಂಕಿ ತಗುಲಿದೆ.

ತೇಜಪ್ಪ ಶೆಟ್ಟಿ ಕೃಷಿಕರಾಗಿದ್ದು, ಮನೆಯಲ್ಲಿ ಪತ್ನಿಯೊಂದಿಗೆ ವಾಸಿಸುತ್ತಿದ್ದಾರೆ. ತೇಜಪ್ಪ ಶೆಟ್ಟಿ ದನಗಳನ್ನು ಮೇಯಿಸಲು ಹೋಗಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ಹತ್ತಿ ಉರಿದಿದೆ. ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸಪಟ್ಟರೂ ಇನ್ನಷ್ಟು ರಭಸದಲ್ಲಿ ಹೊತ್ತಿಕೊಂಡು ಕೋಣೆಯಲ್ಲಿ ದಾಸ್ತಾನಿರಿಸಿದ್ದ ಅಡಿಕೆ, ತೆಂಗಿನ ಕಾಯಿ ಸುಟ್ಟು ಭಸ್ಮಗೊಂಡಿವೆ. ಮನೆಯ ಗೋಡೆ ಬೆಂಕಿಯ ಜ್ವಾಲೆಗೆ ಬೀರುಕು ಬಿಟ್ಟು ಹಾನಿಗೊಂಡಿವೆ. ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಅವಘಡಕ್ಕೆ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.