ಮಾನ್ವಿ ತಾಲೂಕಿನ ಚೀಕಲಪರ್ವಿ ರುದ್ರಮುನೀಶ್ವರ ಮಠದ ಲಿಂ. ರುದ್ರಮುನೀಶ್ವರ ಶಿವಯೋಗಿಗಳವರ 95ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಉಪ್ಪಿನ ಬೆಟಗೇರಿ ಶ್ರೀಅಭಿನವ ರುದ್ರಮುನಿ ಸ್ವಾಮಿಗಳು ಮಾತನಾಡಿದರು.  
ಜಿಲ್ಲೆ

ಜಾತಿ ಭೇದ ಮಾಡದೆ ಸಮಾನ ಭಾವನೆಯಲ್ಲಿ ಬಾಳಿ

ಶಶಿಧರ ಎಲ್

ಮಾನ್ವಿ: ನಾಡಿನ ಎಲ್ಲಿ ಮಠಗಳು ವರ್ಣ, ಜಾತಿ, ಬಡವ, ಶ್ರೀಮಂತ ಎನ್ನುವ ಭೇದ ಮಾಡದೆ ಎಲ್ಲರನ್ನು ಸಮಾನವಾಗಿ ಕಾಣಬೇಕು. ಸಮಾಜದಲ್ಲಿ ಎಲ್ಲರನೂ ಒಗ್ಗೂಡಿಸುವ ಕಾರ್ಯ ನಡೆಯಬೇಕು ಎಂದು ಉಪ್ಪಿನ ಬೆಟಗೇರಿ ಶ್ರೀ ಅಭಿನವ ರುದ್ರಮುನಿ ಸ್ವಾಮಿಗಳು ಹೇಳಿದರು.

ತಾಲೂಕಿನ ಚೀಕಲಪರ್ವಿ ರುದ್ರಮುನೀಶ್ವರ ಮಠದ ಲಿಂ.ರುದ್ರಮುನೀಶ್ವರ ಶಿವಯೋಗಿಗಳವರ 95ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀಮಠದಿಂದ ನಿರಂತರವಾಗಿ ಅನ್ನ, ಅಕ್ಷರ, ಅಭಯ ಧಾನವನ್ನು ನೀಡುತ್ತ ನೀಡುತ್ತ ಬಂದಿವೆ ಪ್ರತಿಯೊಬ್ಬರಲ್ಲಿ ಸಮಾಜದ ಕುರಿತು ಅಭಿಮಾನ, ಗೌರವವನ್ನು ಹೊಂದಿರ ಬೇಕು ಎಂದರು.

ಜಾತ್ರಾ ಮಹೋತ್ಸವ ನಿಮಿತ್ತ ಲಿಂ. ರುದ್ರಮುನೀಶ್ವರ ಶಿವಯೋಗಿಗಳವರ ಕರ್ತು ಗದ್ದುಗೆಗೆ ರುದ್ರಭಿಷೇಕ ಮತ್ತು ಅಲಂಕಾರ, ಮಹಾಮಂಗಳಾರತಿ, ಹಾಲ್ವಿಯ ಚರಣಗಿರಿ ಸಂಸ್ಥಾನ ಮಠದ ಅಭಿನವ ಮಹಾಂತ ಸ್ವಾಮಿಗಳಿಂದ ಷಟಸ್ಥಲ ಧ್ವಜಾರೋಹಣ, ವೀರಭದ್ರೇಶ್ವರ ದೇವಸ್ಥಾನದಿಂದ ಶ್ರೀಮಠಕ್ಕೆ ಪುರವಂತರು, ಸುಮಂಗಲಿಯರಿಂದ ಕುಂಭ ಮತ್ತು ಕಳಸದೊಂದಿಗೆ ಲಿಂ. ರುದ್ರಮುನೀಶ್ವರ ಶಿವಯೋಗಿಗಳವರ ಭಾವಚಿತ್ರ ಮೆರವಣಿಗೆ, ಜಂಗಮೋತ್ಸವ, ಮಹಾಪ್ರಸಾದ ನೇರೆವೇರಿತು.

ಹಾಲ್ವಿಯ ಚರಣಗಿರಿ ಸಂಸ್ಥಾನ ಮಠದ ಅಭಿನವ ಮಹಾಂತ ಸ್ವಾಮಿಗಳು, ಉಪ್ಪಿನ ಬೆಟಗೇರಿ ಅಭಿನವ ರುದ್ರಮುನಿ, ತೀರ್ಥಹಳ್ಳಿಯ ಕೋಣಂದೂರು ಇಮ್ತಿಯಾಜ್ ಸುಲ್ತಾನ್, ಚೀಕಲಪರ್ವಿ ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮಿಗಳು, ಯದಲ್ಲದೊಡ್ಡಿಯ ಮಹಾಲಿಂಗ ಸ್ವಾಮಿಗಳು, ಬೊಮ್ಮನಹಳ್ಳಿಯ ಇಮ್ಮಡಿ ಶಾಂತಮಲ್ಲ ಸ್ವಾಮಿಗಳು, ಹಳೇಕೋಟೆ ಬಳಗನೂರು ಮರಿ ಶಿವಯೋಗಿಗಳ ಮಠದ ಸಿದ್ದಬಸವ ಸ್ವಾಮಿಗಳು, ಮೈಸೂರಿನ ನಿರಂಜನ ಸ್ವಾಮಿಗಳು, ಹರಳಹಳ್ಳಿಯ ಶರಣಬಸವ ದೇವರು ವಿವಿಧ ಮಠಾಧೀಶರು ಇದ್ದರು.