ಪಡುಬಿದ್ರಿ: ಕಟಪಾಡಿಯಲ್ಲಿ ಮೀನು ಸಾಗಾಟ ವಾಹನದಲ್ಲಿದ್ದ ನಗದು ಮಂಗಳವಾರ ಕಳವಾಗಿದ್ದು, ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಾಹನ ಚಾಲಕರಾಗಿ ಅಬ್ದುಲ್ ಸತ್ತಾರ್ ಕಾರ್ಯನಿರ್ವಹಿಸುತ್ತಿದ್ದು, ಕ್ಲೀನರ್ ಮಹಮ್ಮದ್ ಅದ್ನಾನ್ ಹಾಗೂ ಆತನ ಸ್ನೇಹಿತ ನಿಶಾದ್ ಜತೆಗಿದ್ದರು. ಮಂಗಳವಾರ ಮುಂಜಾನೆ ಚಾಲಕ ಕಟಪಾಡಿಯಲ್ಲಿ ವಾಹನ ನಿಲ್ಲಿಸಿ ನಿದ್ದೆಗೆ ಜಾರಿದ್ದು, ಎಚ್ಚರವಾದಾಗ ಕ್ಲೀನರ್ ಹಾಗೂ ಆತನ ಸ್ನೇಹಿತ ನಾಪತ್ತೆಯಾಗಿದ್ದಾರೆ. ವಾಹನ ಪರಿಶೀಲಿಸಿದಾಗ ಹಿಂದಿನ ದಿನ ಇಟ್ಟಿದ್ದ ಲಕ್ಷಾಂತರ ರೂಪಾಯಿ ನಗದು ಕಳವಾಗಿರುವುದು ಬೆಳಕಿಗೆ ಬಂದಿದೆ.