ಜಿಲ್ಲೆ

ವಿದ್ಯಾರ್ಥಿನಿ ಬಸ್​ನಿಂದ ಬಿದ್ದ ಪ್ರಕರಣ: ಚಾಲಕನ ವಿರುದ್ಧ ಕೇಸ್​

Avinash R

ಕಡಬ: ಬಸ್ಸಿನಿಂದ ಎಸೆಯಲ್ಪಟ್ಟು ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿನಿಯ ಚಿಕಿತ್ಸಾ ವೆಚ್ಚ ಭರಿಸುವುದಾಗಿ ತಿಳಿಸಿ ಬಳಿಕ ನೀಡದೆ ಇದ್ದ ಬಸ್​ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ ಟನೆ ಕಡಬದಲ್ಲಿ ನಡೆದಿದೆ.

ಬಜತ್ತೂರು ಗ್ರಾಮದ ಕೇಶವ ಪತ್ನಿ, ಮಗಳ ಜೊತೆ ಆಲಂಕಾರಿನಿಂದ ಕೆ.ಎಸ್​.ಆರ್​.ಟಿ.ಸಿ ಬಸ್​ನಲ್ಲಿ ಆಲಂಕಾರು&ಉಪ್ಪಿನಂಗಡಿ ರಸ್ತೆಯಾಗಿ ಹೋಗುತ್ತಿರುವಾಗ ಆಲಂಕಾರು ಪೇಟೆ ಸಮೀಪದ ಬಾಕಿಲ ಎಂಬಲ್ಲಿ ಬಸ್ಸಿನ ಹಿಂಬದಿಯ ಬಾಗಿಲನ್ನು ಹಾಕದೆ ಬಸ್​ ಒಮ್ಮೆಲೆ ತಿರುಗಿಸಿದ ಪರಿಣಾಮ ಮಗಳು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದರು. ಕೂಡಲೇ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಮೇರೆಗೆ ಮಂಗಳೂರಿನ ವೆನ್ಲಾಕ್​ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿತ್ತು.

ಚಿಕಿತ್ಸಾ ವೆಚ್ಚ ಭರಿಸುವುದಾಗಿ ತಿಳಿಸಿದ್ದ ಬಸ್​ ಚಾಲಕ ಅದಿವೆಪ್ಪ ಬಳಿಕ ಭರಿಸದೆ ಇದ್ದುದರಿಂದ ಆತನ ವಿರುದ್ಧ ದೂರು ನೀಡಲಾಯಿತು.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.