ಹೂವಿನಹಡಗಲಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಆಯೋಜಿಸಿದ್ದ ಕಾವ್ಯ ಪೂರ್ಣಿಮಾ, ಬೆಳದಿಂಗಳ ಕವಿ ಕಾವ್ಯ ದರ್ಶನ ಹಾಗೂ ಸಂಗೀತ ಕಾರ್ಯಕ್ರಮವನ್ನು ಹಿರಿಯ ನ್ಯಾಯವಾದಿ ಕೈಲಾಸನಾಥ ಉದ್ಘಾಟಿಸಿದರು. ಕಸಾಪ ತಾಲೂಕು ಅಧ್ಯಕ್ಷ ಟಿ.ಪಿ.ವೀರೇಂದ್ರ, ಮಾಜಿ ಅಧ್ಯಕ್ಷ ಎಚ್.ಜಿ.ಪಾಟೀಲ, ಜಿಬಿಆರ್ ಕಾಲೇಜು ಆಡಳಿತ ಮಂಡಳಿ ಸದಸ್ಯ ಕೊಡಿಹಳ್ಳಿ ಮುದುಕಪ್ಪ ಇತರರಿದ್ದರು. 
ಜಿಲ್ಲೆ

ಕಂಬಾರರ ಸಾಹಿತ್ಯದಲ್ಲಿ ಜನಪದರ ಬದುಕು ಅಡಕವಾಗಿದೆ.

Kopala - Desk - Eraveni

ಹೂವಿನಹಡಗಲಿ: ಕಂಬಾರರ ಕವನ ಮತ್ತು ಸಾಹಿತ್ಯಗಳಲ್ಲಿ ಜನಪದರ ಜೀವನ ಶೈಲಿಯ ಜತೆಗೆ ಭಾರತೀಯ ಪರಂಪರೆಯ ಸಂಪೂರ್ಣ ದರ್ಶನವಾಗುತ್ತದೆ ಎಂದು ಸಹಾಯಕ ಪ್ರಾಧ್ಯಾಪಕ ಡಾ.ಕೆ.ಸತೀಶ ಹೇಳಿದರು.

ಪಟ್ಟಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರ ಆಯೋಜಿಸಿದ್ದ ಕಾವ್ಯ ಪೂರ್ಣಿಮಾ, ಬೆಳದಿಂಗಳ ಕವಿ ಕಾವ್ಯ ದರ್ಶನ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಂಬಾರರು ಕನ್ನಡ ರಂಗಭೂಮಿಗೆ ಸೀಮಿತವಾಗದೆ, ಭಾರತೀಯ ರಂಗಭೂಮಿಯಲ್ಲಿ ವಿಶಿಷ್ಟ ಚಾಪು ಮೂಡಿಸಿದ್ದಾರೆ. ಜಾನಪದ ಮತ್ತು ಆಧುನಿಕ ನಾಟಕೀಯ ಪ್ರಕಾರಗಳ ಮಿಶ್ರಣಮಾಡಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಉತ್ತರ ಕರ್ನಾಟಕದ ಜನರ ಜೀನವ ಶೈಲಿ ಮತ್ತು ಅಲ್ಲಿಯ ಸಂಸ್ಕೃತಿಗಳನ್ನು ಸಾಹಿತ್ಯದಲ್ಲಿ ಅಡಕ ಮಾಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಇವರ ನಾಟಕಗಳು ಸಮಕಾಲೀನ ಸಮಸ್ಯೆಗಳ ಬಗ್ಗೆ ತಿಳಿಪಡಿಸುತ್ತಾವೆ.

ಹಿರಿಯ ನ್ಯಾಯವಾದಿ ಕೈಲಾಸನಾಥ, ಕಸಾಪ ತಾಲೂಕು ಅಧ್ಯಕ್ಷ ಟಿ.ಪಿ.ವೀರೇಂದ್ರ, ಮಲ್ಲನಕೆರೆಮಠದ ಚನ್ನಬಸವ ಮಹಾಸ್ವಾಮಿಗಳು, ಕಸಾಪ ಮಾಜಿ ಅಧ್ಯಕ್ಷ ಎಚ್.ಜಿ.ಪಾಟೀಲ, ಸಾಹಿತಿ ಶೋಭಾ ಮಲ್ಕಿ ಒಡೆಯರ್,

ಜಿಬಿಆರ್ ಕಾಲೇಜು ಆಡಳಿತ ಮಂಡಳಿ ಸದಸ್ಯ ಕೊಡಿಹಳ್ಳಿ ಮುದುಕಪ್ಪ, ಕವಿಗಳಾದ ಕೋಟಿಹಾಳ, ಪ್ರಕಾಶ್ ಮಲ್ಕಿಒಡೆಯರ್, ಪಿ.ಎಂ.ಬಸವಲಿಂಗಯ್ಯ ಸ್ವಾಮಿ, ಎಲ್.ಖಾದರ್ ಬಾಷಾ ಇತರರಿದ್ದರು.