ಚಿಕ್ಕಬಳ್ಳಾಪುರ: ನಾಲ್ವರು ಪ್ರಯಾಣಿಸುತ್ತಿದ್ದ ಕಾರೊಂದು ಇದ್ದಕ್ಕಿದ್ದಂತೆ ಧಗಧಗನೆ ಹೊತ್ತಿ ಉರಿದು ಆತಂಕದ ವಾತಾವರಣಕ್ಕೆ ಕಾರಣವಾದ ಪ್ರಕರಣವೊಂದು ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಅವಘಡ ಸಂಭವಿಸಿದೆ.
ಚಿಕ್ಕಬಳ್ಳಾಪುರದ ಶಿಡ್ಲಘಟ್ಟದ ನಗರ ಪೊಲೀಸ್ ಠಾಣೆ ಸಮೀಪದ ಅಂಡರ್ಪಾಸ್ನಲ್ಲಿ ಕಾರು ಬರುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿದೆ. ಮಾರುತಿ ಕಂಪನಿಯ ಆಲ್ಟೋ ಕಾರು ಇದಾಗಿದ್ದು, ಇದರಲ್ಲಿ ನಾಲ್ವರು ಪ್ರಯಾಣ ಮಾಡುತ್ತಿದ್ದರು.
ಕಾರಿನಲ್ಲಿದ್ದವರು ಮುರುಗಮಲ್ಲಾ ದೇವಸ್ಥಾನಕ್ಕೆ ಹೋಗಿದ್ದರು. ಅದೃಷ್ಟವಶಾತ್ ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದು, ಕಾರು ಬಹುತೇಕ ಸುಟ್ಟುಹೋಗಿದೆ. ಅಗ್ನಿ ಅವಘಡಕ್ಕೆ ಕಾರಣ ಏನು ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಶಿಡ್ಲಘಟ್ಟ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.