ಜಿಲ್ಲೆ

ಪ್ರಯಾಣಿಕರ ತಂಗುದಾಣಕ್ಕೆ ಕಾರು ಡಿಕ್ಕಿ

ಸೌಮ್ಯ ಆರ್

ಕಾರ್ಕಳ: ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ಪ್ರಾಯಾಣಿಕರ ತಂಗುದಾಣಕ್ಕೆ ಡಿಕ್ಕಿಯಾದ ಘಟನೆ ನಂದಳಿಕೆ ದಡ್ಡು ಬಳಿಯಲ್ಲಿ ಶನಿವಾರ ಸಂಜೆ ನಡೆದಿದೆ. ಪಡುಬಿದ್ರಿ ಕಡೆಯಿಂದ ಕಾರ್ಕಳ ಕಡೆಯತ್ತ ಸಾಗುತ್ತಿದ್ದ ಕಾರು ನಂದಳಿಕೆ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಪ್ರಯಾಣಿಕರ ತಂಗುದಾಣಕ್ಕೆ ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕಾರು ಡಿಕ್ಕಿಯಾದ ರಭಸಕ್ಕೆ ತಂಗುದಾಣದ ಗೋಡೆ ಹಾಗೂ ಪಿಲ್ಲರ್‌ಗೆ ಹಾನಿಯಾಗಿದೆ.