ಜಿಲ್ಲೆ

ಕ್ಲಿಯರ್‌ಮೆಡಿ ರೇಡಿಯಂಟ್ ಆಸ್ಪತ್ರೆ; ಕ್ಯಾನ್ಸರ್‌ಗೆ ಅತ್ಯಾಧುನಿಕ ಚಿಕಿತ್ಸೆ ಲಭ್ಯ | Clearmedi Radiant Hospital

ಕ್ಯಾನ್ಸರ್ ಬಂದರೆ ಬದುಕೇ ಮುಗಿದು ಹೋಯಿತು ಎಂಬ ಭಾವನೆ ಹಲವರಲ್ಲಿ ಇದೆ. ಇದು ಕೈಗೆಟುಕದ ಚಿಕಿತ್ಸೆ ಎಂಬುದು ಬಹುತೇಕ ಬಡ ಹಾಗೂ ಮಧ್ಯಮ ವರ್ಗದವರ ಅಭಿಪ್ರಾಯ. ಆದರೆ ಕ್ಯಾನ್ಸರ್‌ಗೆ ವಿಶ್ವದರ್ಜೆಯ ಅತ್ಯಾಧುನಿಕ ಚಿಕಿತ್ಸೆಯು ಒಂದೇ ಸೂರಿನಡಿ ದೊರೆತರೆ ರೋಗಿಗಳು ರೋಗಮುಕ್ತರಾಗಿ ಸಾಮಾನ್ಯರಂತೆ ಆರೋಗ್ಯಕರ ಜೀವನ ನಡೆಸಬಹುದು. ಇಂತಹದೊಂದು ಅತ್ಯಾಧುನಿಕ ಚಿಕಿತ್ಸೆಯು ಶ್ರೀಮಂತರಿಗೆ ಮಾತ್ರವಲ್ಲ ಬಡ ಹಾಗೂ ಮಧ್ಯಮ ವರ್ಗದವರಿಗೂ ಕೈಟುಕುವ ದರದಲ್ಲಿ ದೊರೆಯುವಂತೆ ಮಾಡಿದೆ ಮೈಸೂರಿನ ವಿಜಯನಗರ 3ನೇ ಹಂತದಲ್ಲಿರುವ ಕ್ಲಿಯರ್‌ಮೆಡಿ ರೇಡಿಯಂಟ್ ಆಸ್ಪತ್ರೆ(Clearmedi Radiant Hospital).

ಕ್ಯಾನ್ಸರ್ ಕುರಿತು ಇರುವ ತಪ್ಪು ಕಲ್ಪನೆಗಳು ಹಾಗೂ ವೈದ್ಯಕೀಯ ಸೇವೆಗಳು ದುಬಾರಿ ಎಂಬ ಕಾರಣಕ್ಕೆ ಸಾಕಷ್ಟು ಜನರು ಕ್ಯಾನ್ಸರ್‌ಗೆ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಾರೆ. ಈ ರೀತಿಯ ನಿರ್ಲಕ್ಷ್ಯ ರೋಗಿಗಳ ಜೀವಕ್ಕೇ ಅಪಾಯ ತಂದೊಡ್ಡುವುದು ನಿಶ್ಚಿತ. ಹಾಗಾಗಿ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದು ಉತ್ತಮ ಜೀವನ ನಡೆಸಿ ಎಂಬುದು ಕ್ಲಿಯರ್‌ಮೆಡಿ ಹೆಲ್ತ್‌ಕೇರ್ ಆಸ್ಪತ್ರೆ ವೈದ್ಯರುಗಳ ಸಲಹೆ. ಬಡ ಹಾಗೂ ಮಧ್ಯಮ ವರ್ಗದವರು ಬಿಪಿಎಲ್ ಕಾರ್ಡ್ ಅಥವಾ ಸರ್ಕಾರದ ಆರೋಗ್ಯ ಸೇವೆಗಳನ್ನು ಬಳಸಿಕೊಂಡೇ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು.

ಹೆಚ್ಚುತ್ತಿರುವ ಕ್ಯಾನ್ಸರ್ ರೋಗಿಗಳ ಸಂಖ್ಯೆ

ಕ್ಯಾನ್ಸರ್ ಕುರಿತು ಅರಿವಿನ ಕೊರತೆಯಿಂದ ದೇಶದಲ್ಲಿ ಪ್ರತಿ ವರ್ಷ ರೋಗಿಗಳ ಸಂಖ್ಯೆ ವೃದ್ಧಿಸುತ್ತಿದ್ದು, ಚೀನಾ, ಅಮೆರಿಕದ ನಂತರ ಭಾರತ 3ನೇ ಸ್ಥಾನ ಪಡೆದಿರುವುದು ಕಳವಳಕಾರಿ ಸಂಗತಿ. ಕ್ಯಾನ್ಸರ್ ಕುರಿತು ಪ್ರತಿಯೊಬ್ಬರಲ್ಲೂ ಅರಿವು ಮೂಡಿದರೆ ಈ ಪ್ರಮಾಣವನ್ನು ತಗ್ಗಿಸಬಹುದು ಎನ್ನುತ್ತಾರೆ ಕ್ಲಿಯರ್‌ಮೆಡಿ ರೇಡಿಯಂಟ್ ಆಸ್ಪತ್ರೆಯ ರೇಡಿಯೇಷನ್ ಆಂಕೊಲಾಜಿಸ್ಟ್ ಡಾ.ಚೈತ್ರಾ ಕಟಕೊಳ.

ಗ್ರಾಮೀಣ ಜನರಿಗಿಂತ ನಗರ ಪ್ರದೇಶದವರಲ್ಲಿ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಪ್ರಮುಖ ಕಾರಣ ಜೀವನಶೈಲಿಯಲ್ಲಿ ಆಗಿರುವ ಬದಲಾವಣೆಗಳು. ಬಹುತೇಕ ಗ್ರಾಮೀಣರು ಇಂದಿಗೂ ಶ್ರಮದಾಯಕ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದು ಕ್ಯಾನ್ಸರ್ ಅಪಾಯದಿಂದ ಅವರನ್ನು ರಕ್ಷಿಸುತ್ತಿದೆ. ಕಚೇರಿಯಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಇಂತಹ ಕೆಲಸಗಳು ಹೆಚ್ಚು ದೈಹಿಕ ಶ್ರಮ ಬೇಡುವುದಿಲ್ಲ. ಇದರ ಜತೆಗೆ ದೈಹಿಕ ಚಟುವಟಿಕೆಯೂ ಕಡಿಮೆಯಾಗಿದೆ. ಜೀವನಶೈಲಿಯಲ್ಲಿ ಆಗಿರುವ ಈ ಬದಲಾವಣೆಗಳು ಕ್ಯಾನ್ಸರ್ ಬರಲು ಒಂದು ಕಾರಣವಾಗುತ್ತಿದೆ ಎನ್ನುತ್ತಾರೆ ಅವರು.

ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಬಗ್ಗೆ ಇರಲಿ ಎಚ್ಚರ

ಇತ್ತೀಚೆಗೆ ಸ್ತನ ಕ್ಯಾನ್ಸರ್ ಪ್ರಮಾಣ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಪಾಶ್ಚಿಮಾತ್ಯ ಆಹಾರ ಪದ್ಧತಿ ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು. ಜೀವನಶೈಲಿಯಲ್ಲಿ ಆದ ಬದಲಾವಣೆಯಿಂದ ಬಹುಬೇಗನೆ ಮುಟ್ಟಾಗುತ್ತಿರುವುದು, 50 ವರ್ಷವಾದರೂ ಮುಟ್ಟು ನಿಲ್ಲದೆ ಇರುವುದು, ಸಾಕಷ್ಟು ವಯಸ್ಸಾದ ನಂತರ ಮಕ್ಕಳನ್ನು ಪಡೆಯುವುದು, ಕನಿಷ್ಠ 1 ವರ್ಷ ಮಗುವಿಗೆ ಸ್ತನ್ಯಪಾನ್ಯ ನೀಡದೆ ಇರುವುದು, ಮಕ್ಕಳಾಗಲು ಹಾರ್ಮೋನ್ ಚಿಕಿತ್ಸೆ ಪಡೆಯುವುದು ಸೇರಿದಂತೆ ವಿವಿಧ ಕಾರಣಗಳಿಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ ಎಂದು ರೇಡಿಯೇಷನ್ ಆಂಕೊಲಾಜಿಸ್ಟ್ ಡಾ.ಚೈತ್ರಾ ಕಟಕೊಳ ಹೇಳಿದರು.

ಸ್ತನ ಕ್ಯಾನ್ಸರ್ ಕಾಣಿಸಿಕೊಂಡರೆ ಸ್ತನದಲ್ಲಿ ಗೆಡ್ಡೆ ಕಾಣಿಸಿಕೊಳ್ಳುತ್ತದೆ. ಎರಡು ಸ್ತನಗಳ ಗಾತ್ರದಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಕೆಲವರಿಗೆ ಕಂಕಳಲ್ಲಿ ಗೆಡ್ಡೆ ಕಾಣಿಕೊಳ್ಳಬಹುದು ಅಥವಾ ಚರ್ಮದಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳಬಹುದು. ಇವೆಲ್ಲವೂ ಸ್ತನ ಕ್ಯಾನ್ಸರ್‌ನ ಲಕ್ಷಣಗಳಾಗಿವೆ. ಸ್ತನದಲ್ಲಿ ಗೆಡ್ಡೆ ಕಾಣಿಕೊಂಡ ತಕ್ಷಣ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯಬೇಕು. ಪ್ರಾರಂಭಿಕ ಹಂತದಲ್ಲಿ ಈ ಗೆಡ್ಡೆಯಲ್ಲಿ ನೋವು ಕಾಣಿಸಿಕೊಳ್ಳುವುದಿಲ್ಲ, ಹೀಗಾಗಿ ಬಹುತೇಕರು ನಿರ್ಲಕ್ಷಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ತನ ಕ್ಯಾನ್ಸರ್ ನಿರ್ಲ್ಕಕ್ಷ್ಯ ಮಾಡಿದರೆ ಕ್ಯಾನ್ಸರ್ ಮುಂದಿನ ಹಂತದಲ್ಲಿ ಮೂಳೆ, ಲಿವರ್, ಶಾಶ್ವಕೋಶ, ಮಿದುಳಿಗೂ ಹರಡುತ್ತದೆ. ಸ್ತನ ಕ್ಯಾನ್ಸರ್‌ಗೆ ನಮ್ಮ ಆಸ್ಪತ್ರೆಯಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತಿದ್ದು ಇದರ ಪ್ರಯೋಜನವನ್ನು ಮಹಿಳೆಯರು ಪಡೆದುಕೊಳ್ಳಬೇಕು. 40 ವರ್ಷ ಮೇಲ್ಪಟ್ಟ ಮಹಿಳೆಯರು ಪ್ರತಿ ವರ್ಷ (ಮ್ಯಾಮೋಗ್ರಫಿ) ತಪಾಸಣೆ ಮಾಡಿಸಿಕೊಳ್ಳಬೇಕು. ಇತ್ತೀಚೆಗೆ ಯುವತಿಯರಲ್ಲೂ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ತಾಯಿಯಲ್ಲಿ ಸ್ತನ ಕ್ಯಾನ್ಸರ್ ಇದ್ದರೆ ಮಗಳಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಮಹಿಳೆಯರು ಸ್ತನ ಕ್ಯಾನ್ಸರ್ ವಿಚಾರದಲ್ಲಿ ಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದರು.

ಮಹಿಳೆಯರಲ್ಲಿ ಮಾತ್ರವಲ್ಲ ಪುರುಷರಲ್ಲೂ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಮಹಿಳೆಯರಿಗೆ ಹೋಲಿಕೆ ಮಾಡಿದರೆ ಈ ಸಂಖ್ಯೆ ತೀರಾ ಕಡಿಮೆ. ಸ್ತನ ಕ್ಯಾನ್ಸರ್ ಪತ್ತೆ ಹಚ್ಚಲು ಬಯೋಪ್ಸಿ ಪರೀಕ್ಷೆ ನಡೆಸಲಾಗುತ್ತದೆ. ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ ಆ ಕ್ಯಾನ್ಸರ್‌ನ ಗುಣಲಕ್ಷಣಗಳನ್ನು ತಿಳಿದುಕೊಳ್ಳಲು ಪರೀಕ್ಷೆ (ಬಯೋಲಜಿ) ನಡೆಸಲಾಗುತ್ತದೆ. ಆ ಕ್ಯಾನ್ಸರ್ ತೀವ್ರಗತಿಯಲ್ಲಿ ಹರಡುತ್ತಿದೆಯೇ? ಅಥವಾ ನಿಧಾನವಾಗಿ ಹರಡುತ್ತಿದೆಯೇ? ಕ್ಯಾನ್ಸರ್ ಯಾವ ಹಂತದಲ್ಲಿ ಇದೆ ಎಂಬುದನ್ನು ಅರಿತು ಅದಕ್ಕೆ ಪೂರಕವಾಗಿ ಚಿಕಿತ್ಸೆ ನೀಡಲಾಗುವುದು ಎಂದರು.

ಅತ್ಯಾಧುನಿಕ ಚಿಕಿತ್ಸೆ ಲಭ್ಯ

ಸ್ತನ ಕ್ಯಾನ್ಸರ್‌ಗೆ ಸಾಕಷ್ಟು ರೀತಿಯ ಚಿಕಿತ್ಸೆ ಇದೆ. ಸಾಕಷ್ಟು ಜನರಿಗೆ ಗೊತ್ತಿರುವುದು ರೇಡಿಯೇಷನ್, ಕೀಮೋಥೆರಪಿ ಹಾಗೂ ಶಸ್ತ್ರಚಿಕಿತ್ಸೆ ಮಾತ್ರ. ಇದರ ಹೊರತಾಗಿಯೂ ಸಾಕಷ್ಟು ಚಿಕಿತ್ಸೆಗಳು ಪ್ರಸ್ತುತ ಲಭ್ಯವಿದೆ. ಟಾರ್ಗೇಟೆಡ್ ಥೆರಪಿ, ಇಮ್ಯೂನೋ ಥೆರಪಿ, ಹಾರ್ಮೋನ್ ಥೆರಪಿ ನೀಡಬಹುದು ಎಂದು ಡಾ.ಚೈತ್ರಾ ಕಟಕೊಳ ತಿಳಿಸಿದರು.

ಸ್ತನ ಉಳಿಸಲು ಅವಕಾಶವಿದೆ

ಪ್ರಾರಂಭಿಕ ಹಂತದಲ್ಲಿ ಸ್ತನಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಂಡರೆ ಸ್ತನವನ್ನು ಉಳಿಸಬಹುದು. ಸ್ತನದಲ್ಲಿ ಗೆಡ್ಡೆಯ ಪ್ರಮಾಣ ಸಾಕಷ್ಟು ಬೆಳವಣಿಗೆ ಹೊಂದಿದ್ದರೆ ಸ್ತನವನ್ನು ಸಂಪೂರ್ಣ ತೆಗೆಯಬೇಕಾಗುತ್ತದೆ. ಸಂಪೂರ್ಣ ತೆಗೆದರೆ ಮತ್ತೆ ಸ್ತನ ಮರುನಿರ್ಮಾಣಕ್ಕೂ ಚಿಕಿತ್ಸೆ ನಮ್ಮ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದರು.

ಲಸಿಕೆಯಿಂದ ಕ್ಯಾನ್ಸರ್ ತಡೆಗಟ್ಟಬಹುದು

ಕ್ಯಾನ್ಸರ್ ಬಾರದಂತೆ ತಡೆಯಲು ಲಸಿಕೆ ಲಭ್ಯವಿದ್ದು, ಲಸಿಕೆ ಪಡೆದರೆ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಮಾಡಬಹುದು ಎಂದು ರೇಡಿಯೇಷನ್ ಆಂಕೊಲಾಜಿಸ್ಟ್ ಡಾ.ಚೈತ್ರಾ ಕಟಕೊಳ ಹೇಳಿದರು. ಹ್ಯೂಮನ್ ಪ್ಯಾಪಿಲ್ಲೋಮ ವೈರಸ್(ಎಚ್‌ಪಿವಿ)ನಿಂದ ಸರ್ವಿಕಲ್ ಕ್ಯಾನ್ಸರ್, ವೆಜೈನಲ್ ಕ್ಯಾನ್ಸರ್, ವಲ್ವಲ್ ಕ್ಯಾನ್ಸರ್, ಏನಲ್‌ಕೆನಾಲ್ ಕ್ಯಾನ್ಸರ್, ಓರೊಫೆರಿಂಜಲ್ ಕ್ಯಾನ್ಸರ್, ಪಿನೈಲ್ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಲಸಿಕೆಯನ್ನು 9 ರಿಂದ 45 ವರ್ಷದವರು ಪಡೆಯಬಹುದು. ಆದರೆ 9 ರಿಂದ 26 ವರ್ಷದೊಳಗೆ ಪಡೆದರೆ ಹೆಚ್ಚು ಪರಿಣಾಕಾರಿ. ಇದು ಜನಸಾಮಾನ್ಯರ ಕೈಗೆಟುಕುವ ಲಸಿಕೆಯಾಗಿದೆ. ಸರ್ವಿಕಲ್ ಕ್ಯಾನ್ಸರ್ ಬರಲು ಶೇ.80ರಷ್ಟು ಹ್ಯೂಮನ್ ಪ್ಯಾಪಿಲ್ಲೋಮ ವೈರಸ್ ಕಾರಣವಾದರೆ ಧೂಮಪಾನ, ತಂಬಾಕು ಸೇವನೆಯಿಂದ ಶೇ.20ರಷ್ಟು ಸರ್ವಿಕಲ್ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಲಸಿಕೆಯು ಹ್ಯೂಮನ್ ಪ್ಯಾಪಿಲ್ಲೋಮ ವೈರಸ್‌ನಿಂದ ಬರುವ ಕ್ಯಾನ್ಸರ್‌ಅನ್ನು ತಡೆಗಟ್ಟಬಲ್ಲದು. ಆದರೆ ದುಶ್ಚಟಗಳಿಂದ ಬರುವ ಕ್ಯಾನ್ಸರ್ ಅನ್ನು ಲಸಿಕೆ ತಡೆಯುವುದಿಲ್ಲ. ಹಾಗಾಗಿ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ತುಂಬಾ ಉತ್ತಮ. ಲಸಿಕೆ ಬರುವುದಕ್ಕಿಂತ ಮುಂಚೆ ದೇಶದಲ್ಲಿ ಸರ್ವಿಕಲ್ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿ ಇತ್ತು. ಆದರೆ ಇದೀಗ ಈ ಪ್ರಮಾಣ ಕಡಿಮೆಯಾಗಿದೆ ಎಂದರು.

ಕ್ಯಾನ್ಸರ್ ಚಿಕಿತ್ಸೆ ದುಬಾರಿಯಲ್ಲ

ಕ್ಯಾನ್ಸರ್ ಚಿಕಿತ್ಸೆ ದುಬಾರಿ ಎಂದು ತಿಳಿದು ಸಾಕಷ್ಟು ಜನರು ಚಿಕಿತ್ಸೆ ಪಡೆಯಲು ಬಯಸುವುದಿಲ್ಲ. ಸಾಕಷ್ಟು ಕ್ಯಾನ್ಸರ್ ಕಾಯಿಲೆಗಳಿಗೆ ಸರ್ಕಾರಿ ಯೋಜನೆಗಳಡಿಯಲ್ಲಿಯೇ ಸಂಪೂರ್ಣ ಚಿಕಿತ್ಸೆ ಪಡೆಯಬಹುದು ಎಂದು ಮೆಡಿಕಲ್ ಆಂಕೋಲಾಜಿ ಎಚ್‌ಒಡಿ ಮತ್ತು ಸೀನಿಯರ್ ಕನ್ಸಲ್ಟೆಂಟ್ ಡಾ.ಸಿ.ಬಿ. ಅವಿನಾಶ್ ಹೇಳಿದರು.

ಬಿಪಿಎಲ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಯಶಸ್ವಿನಿ, ಇಎಸ್‌ಐ ಆರೋಗ್ಯಸೇವೆಯನ್ನು ಬಳಸಿಕೊಂಡು ನಮ್ಮ ಆಸ್ಪತ್ರೆಯಲ್ಲಿ ಬಹುತೇಕ ಉಚಿತ ಚಿಕಿತ್ಸೆ ಪಡೆಯಬಹುದು. ಸಾಕಷ್ಟು ಜನರಿಗೆ ನಮ್ಮ ಆಸ್ಪತ್ರೆಯಲ್ಲಿ ಈ ಕುರಿತು ಮಾಹಿತಿ ನೀಡಿ ಅವರಿಗೆ ಉಚಿತ ಚಿಕಿತ್ಸೆ ದೊರೆಯುವಂತೆ ಮಾಡಿದ್ದೇವೆ ಎಂದು ಹೇಳಿದರು.

ಕ್ಯಾನ್ಸರ್ ಅಂದ ತಕ್ಷಣ ಪ್ರತಿಯೊಬ್ಬರಲ್ಲೂ ಭಯದ ವಾತಾವರಣ ಮೂಡುತ್ತದೆ. ಹೀಗಾಗಿ ಕ್ಯಾನ್ಸರ್ ರೋಗ ಹಾಗೂ ರೋಗಿಗಳ ಕುರಿತು ಜನರಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳು ಇದ್ದು, ಇದು ಬದಲಾಗಬೇಕು. ಕ್ಯಾನ್ಸರ್ ರೋಗಿಗೆ ಕೀಮೊಥೆರಪಿ ನೀಡಿದಾಗ ಕೂದಲು ಉದುರಲು ಪ್ರಾರಂಭವಾಗುತ್ತದೆ. ಆದರೆ ಜನರು ಕ್ಯಾನ್ಸರ್‌ನಿಂದ ಕೂದಲು ಉದುರುತ್ತಿದೆ ಎಂದು ತಪ್ಪಾಗಿ ತಿಳಿದುಕೊಂಡಿದ್ದಾರೆ. ಈ ತಪ್ಪು ಕಲ್ಪನೆ ಹೋಗಲಾಡಿಸುವ ಜವಾಬ್ದಾರಿ ಸಮಾಜ ಹಾಗೂ ವೈದ್ಯರ ಮೇಲಿದೆ ಎಂದರು.

ಕ್ಯಾನ್ಸರ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಹೀಗಾಗಿ ಜನರು ಕ್ಯಾನ್ಸರ್ ರೋಗಿಗಳ ಬಳಿ ತೆರಳಲು ಹಾಗೂ ಅವರಿಗೆ ಆರೈಕೆ ಮಾಡಲು ಹಿಂದೇಟು ಹಾಕುತ್ತಾರೆ. ಯಾವುದೇ ಕಾರಣಕ್ಕೂ ಕ್ಯಾನ್ಸರ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ. ಈ ತಪ್ಪು ಕಲ್ಪನೆ ದೂರವಾಗಬೇಕು. ಕ್ಯಾನ್ಸರ್ ಕುರಿತು ತಪ್ಪು ಕಲ್ಪನೆ ದೂರ ಮಾಡಲು ಮಕ್ಕಳಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಕಾರ್ಯ ಆಗಬೇಕು. ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಕ್ಯಾನ್ಸರ್‌ನಿಂದ ಗೆದ್ದು ಬಂದವರು ಸಾಕಷ್ಟು ಜನರು ಇದ್ದಾರೆ. ಕ್ಯಾನ್ಸರ್ ಬಂದರೆ ಅದನ್ನು ಎದುರಿಸುವ ಧೈರ್ಯ ಬೆಳೆಸಿಕೊಳ್ಳಿ. ಕ್ಯಾನ್ಸರ್‌ನಿಂದ ಮುಕ್ತರಾದವರು ನಂತರ ವೈವಾಹಿಕ ಜೀವನಕ್ಕೆ ಕಾಲಿಟ್ಟು ಸುಖಿ ಜೀವನ ನಡೆಸುತ್ತಿರುವ ಹಲವಾರು ಉದಾಹರಣೆಗಳು ಇವೆ. ಕ್ಯಾನ್ಸರ್ ರೋಗಿಗಳು ವೈವಾಹಿಕ ಜೀವನಕ್ಕೆ ಕಾಲಿಡಬೇಡಿ, ರೋಗದಿಂದ ಸಂಪೂರ್ಣ ಮುಕ್ತರಾದ ನಂತರ ವೈವಾಹಿಕ ಜೀವನಕ್ಕೆ ಕಾಲಿಡಿ ಎಂದು ಸಲಹೆ ನೀಡಿದರು.

ವೈದ್ಯಕೀಯ ಕ್ಷೇತ್ರ ಸಾಕಷ್ಟು ಅಭಿವೃದ್ಧಿಗೊಂಡಿದ್ದು, ಕ್ಯಾನ್ಸರ್‌ಗೆ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ಕೂದಲು ಉದುರುವುದನ್ನು ತಡೆಯಲು ಸಹ ಚಿಕಿತ್ಸೆ ಇದೆ. ಕೀಮೋಥೆರಪಿ ಮಾತ್ರವಲ್ಲ ಹಲವಾರು ರೀತಿಯ ಚಿಕಿತ್ಸಾ ವಿಧಾನಗಳು ಇವೆ. ಟಾರ್ಗೆಟೆಡ್ ಥೆರಪಿಯಲ್ಲಿ ಮಾತ್ರೆ ನೀಡುವ ಮೂಲಕ ಕ್ಯಾನ್ಸರ್ ಅನ್ನು ಗುಣಪಡಿಸಲಾಗುವುದು. ಇಮ್ಯುನೋಥೆರಪಿಯಲ್ಲಿ ನಮ್ಮಲ್ಲಿರುವ ರೋಗನಿರೋಧಕ ಕೋಶಗಳನ್ನು ಕ್ಯಾನ್ಸರ್ ಕೋಶದ ವಿರುದ್ಧ ಹೋರಾಡಲು ಬಿಡಲಾಗುತ್ತದೆ. ಇದರಿಂದ ಯಾವುದೇ ಅಡ್ಡಪರಿಣಾಮ ಇರುವುದಿಲ್ಲ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. 4ನೇ ಹಂತದಲ್ಲಿದ್ದ ಚಿಕಿತ್ಸೆ ಪಡೆದ ವ್ಯಕ್ತಿಗಳು 10 ವರ್ಷ ಬದುಕುಳಿದ ಉದಾಹರಣೆಗಳು ಸಹ ಇವೆ. ಸದ್ಯದ ಪರಿಸ್ಥಿತಿಯಲ್ಲಿ ಶೇ.100 ರಷ್ಟು ಕ್ಯಾನ್ಸರ್ ಮುಕ್ತ ಜಗತ್ತು ನಿರ್ಮಾಣ ಸಾಧ್ಯವಿಲ್ಲ. ಇದಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.

ಬೋನ್‌ಮ್ಯಾರೋ ಟ್ರಾನ್ಸ್‌ಪ್ಲಾಂಟೇಷನ್ ಸೇವೆ ಲಭ್ಯ

ಎಷ್ಟೋ ಬಾರಿ ರಕ್ತದ ಕ್ಯಾನ್ಸರ್ (ಲಿಂಫೋಮಾ ಲ್ಯುಕೇಮಿಯಾ) ರೋಗಿಗಳಿಗೆ ಕೇವಲ ಕೀಮೋಥೆರಪಿಯಿಂದ ಮಾತ್ರ ಗುಣಮುಖವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಅವರಿಗೆ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟೇಷನ್ ಮಾಡಬೇಕಾಗುತ್ತದೆ. ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟೇಷನ್ ಅನ್ನು ಪ್ರಥಮ ಬಾರಿಗೆ ಮೈಸೂರಿನಲ್ಲಿ ಪ್ರಾರಂಭಿಸಿದ್ದೇವೆ. ಈ ಹಿಂದೆ ಬೆಂಗಳೂರನ್ನು ಅವಲಂಬಿಸುವ ಪರಿಸ್ಥಿತಿ ಇತ್ತು. ಬೋನ್‌ಮ್ಯಾರೋ ಟ್ರಾನ್ಸ್‌ಪ್ಲಾಂಟೇಷನ್‌ನಲ್ಲಿ ನಮ್ಮದೇ ಕೋಶವನ್ನು ಹಾಕುತ್ತಾರೆ ಅಥವಾ ಬೇರೆಯವರಿಂದ ರೋಗಿಯ ಕೋಶಕ್ಕೆ ಹೊಂದಾಣಿಕೆಯಾಗುವ ಕೋಶವನ್ನು ಹಾಕಿ ರೋಗಿಯನ್ನು ಗುಣಪಡಿಸಲಾಗುತ್ತದೆ ಎಂದು ಮೆಡಿಕಲ್ ಆಂಕೊಲಾಜಿ ಎಚ್‌ಒಡಿ ಮತ್ತು ಸೀನಿಯರ್ ಕನ್ಸಲ್ಟೆಂಟ್ ಡಾ.ಸಿ.ಬಿ. ಅವಿನಾಶ್ ಹೇಳಿದರು.

ಸೈಲೆಂಟ್ ಕಿಲ್ಲರ್ ‘ಕ್ಯಾನ್ಸರ್’ ಬಗ್ಗೆ ಇರಲಿ ಎಚ್ಚರ

ಕ್ಯಾನ್ಸರ್ ನೋವು ನೀಡುವುದಿಲ್ಲ, ನೋವು ನೀಡಲು ಪ್ರಾರಂಭಿಸಿದೆ ಅಂದರೆ ಅದು ದೇಹದ ತುಂಬಾ ಹರಡಿದೆ ಎಂದರ್ಥ. ಕ್ಯಾನ್ಸರ್ ಎಂಬುದು ಸೈಲೆಂಟ್ ಕಿಲ್ಲರ್. ಹಾಗಾಗಿ ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುವುದು ಉತ್ತಮ ಎನ್ನುತ್ತಾರೆ ಸರ್ಜಿಕಲ್ ಆಂಕೊಲಾಜಿಸ್ಟ್ ಡಾ.ಎಸ್. ನವೀನ್.

ಕ್ಯಾನ್ಸರ್‌ಗೆ ಮೂರು ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅವುಗಳೆಂದರೆ ಕೀಮೋಥೆರಪಿ, ಸರ್ಜಿಕಲ್ ಮತ್ತು ರೇಡಿಯೇಷನ್. ಕೆಲವೊಂದು ಕ್ಯಾನ್ಸರ್‌ಗಳಿಗೆ ಈ ಮೂರು ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಇನ್ನು ಕೆಲವು ಕ್ಯಾನ್ಸರ್​​ಗಳಿಗೆ ಈ ಮೂರು ಚಿಕಿತ್ಸೆ ಪೈಕಿ ಯಾವುದಾದರು ಒಂದು ಚಿಕಿತ್ಸೆ ಸಾಕಾಗುತ್ತದೆ ಎಂದರು.

ಕ್ಯಾನ್ಸರ್ ಯಾವ ಹಂತದಲ್ಲಿ ಇದೆ ಎಂದು ನೋಡಿಕೊಂಡು ಎರಡು ರೀತಿಯ ಶಸ್ತ್ರಚಿಕಿತ್ಸೆ ಮಾಡುತ್ತೇವೆ. ಕ್ಯಾನ್ಸರ್ ಕೋಶವು ದೇಹದ ಎಲ್ಲ ಭಾಗಕ್ಕೆ ಹರಡದೆ ಇದ್ದರೆ ರೋಗಿಯ ಜೀವ ಉಳಿಸಲು ಶಸ್ತ್ರಚಿಕಿತ್ಸೆ ಮಾಡುತ್ತೇವೆ. ಕ್ಯಾನ್ಸರ್‌ಕೋಶ ಸಂಪೂರ್ಣ ದೇಹಕ್ಕೆ ಹರಡಿದರೆ ರೋಗಿಯ ಜೀವ ಉಳಿಸಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ರೋಗಿಗೆ ನೋವನ್ನು ಕಡಿಮೆ ಮಾಡುವ ರೀತಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದರು.

ಓವರಿನ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಹಿಳೆಯರಲ್ಲಿ 4 ರಿಂದ 8 ಕೆ.ಜಿ.ವರೆಗೆ ಗೆಡ್ಡೆ ಬೆಳೆದಿರುವುದನ್ನು ನಮ್ಮ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ತೆಗೆದಿದ್ದೇವೆ. ಸಾಕಷ್ಟು ಜನರು ಈ ಗೆಡ್ಡೆಯನ್ನು ಬೊಜ್ಜು ಅಂತ ತಪ್ಪಾಗಿ ತಿಳಿದುಕೊಂಡಿದ್ದಾರೆ. ಪ್ರಾರಂಭಿಕ ಹಂತದಲ್ಲಿ ಗೆಡ್ಡೆಯಿಂದ ನೋವು ಸಹ ಕಾಣಿಸಿಕೊಳ್ಳುವುದಿಲ್ಲ. ಬಾಯಿ ಕ್ಯಾನ್ಸರ್ ಕಾಣಿಸಿಕೊಂಡ ಸಂದರ್ಭ ಕ್ಯಾನ್ಸರ್ ಗಂಟನ್ನು ಸಂಪೂರ್ಣ ತೆಗೆಯಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಮುಖದ ಒಂದು ಭಾಗವನ್ನು ಕತ್ತರಿಸಿ ತೆಗೆಯಬೇಕಾಗುತ್ತದೆ. ಅಂತಹ ರೋಗಿಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗುತ್ತದೆ. ಪ್ಲಾಸ್ಟಿಕ್ ಸರ್ಜರಿಯ ಸೇವೆ ಸಹ ನಮ್ಮ ಆಸ್ಪತ್ರೆಯಲ್ಲಿ ದೊರೆಯುತ್ತದೆ ಎಂದರು.

ರೋಬಾಟಿಕ್ ಶಸ್ತ್ರಚಿಕಿತ್ಸೆ ನೀಡುವ ಗುರಿ

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇತ್ತೀಚೆಗೆ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಮೊದಲು ಓಪನ್ ಸರ್ಜರಿ ನಡೆಸಬೇಕಾಗಿತ್ತು. ಇದೀಗ ಲ್ಯಾಪ್ರೋಸ್ಕೋಪಿ ಹೆಚ್ಚಾಗಿ ಬಳಸಲಾಗುತ್ತಿದೆ. ಇದೀಗ ಹೊಸದಾಗಿ ರೋಬಾಟಿಕ್ ಶಸ್ತ್ರಚಿಕಿತ್ಸೆ ಬರುತ್ತಿದೆ. ಲ್ಯಾಪ್ರೋಸ್ಕೋಪಿಯಲ್ಲಿ ಯಾವ ರೀತಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತದೆಯೋ ಅದೇ ಕೆಲಸವನ್ನು ರೋಬಾಟಿಕ್‌ನಲ್ಲಿ ಮಾಡಲಾಗುತ್ತದೆ. ಮುಂದಿನ ಹಂತದಲ್ಲಿ ರೋಬಾಟಿಕ್ ಶಸ್ತ್ರಚಿಕಿತ್ಸೆ ನೀಡುವ ಉದ್ದೇಶವನ್ನು ನಮ್ಮ ಆಸ್ಪತ್ರೆ ಹೊಂದಿದೆ ಎಂದು ಸರ್ಜಿಕಲ್ ಆಂಕೊಲಾಜಿಸ್ಟ್ ಡಾ.ಎಸ್. ನವೀನ್ ಹೇಳಿದರು.

ಕ್ಯಾನ್ಸರ್ ಎಂದರೆ ಅದು ಬದುಕಿನ ಕೊನೆ ಅಂದುಕೊಳ್ಳಬೇಡಿ. ಕ್ಯಾನ್ಸರ್‌ಗೆ ಸಾಕಷ್ಟು ಚಿಕಿತ್ಸೆಗಳು ಇವೆ. ಈ ಹಿಂದೆ ಸ್ತನಕ್ಯಾನ್ಸರ್ ಕಾಣಿಸಿಕೊಂಡರೆ ಸ್ತನವನ್ನು ಸಂಪೂರ್ಣ ತೆಗೆಯಬೇಕಾಗಿತ್ತು. ಆದರೆ ವೈದ್ಯಕೀಯ ತಂತ್ರಜ್ಞಾನ ಎಷ್ಟೊಂದು ಮುಂದುವರೆದಿದೆ ಎಂದರೆ ಸ್ತನದಲ್ಲಿ ಕಾಣಿಸಿಕೊಂಡಿರುವ ಗಂಟನ್ನು ಮಾತ್ರ ತೆಗೆದು ಸ್ತನವನ್ನು ಉಳಿಸಬಹುದು ಎಂದರು.

ನಮ್ಮ ಆಸ್ಪತ್ರೆಯಲ್ಲಿ ಫ್ರೋಜನ್ ವಿಭಾಗ ಇದ್ದು, ರೋಗಿ ಆಪರೇಷನ್ ಥಿಯೇಟರ್‌ನಲ್ಲಿ ಇರುವಾಗಲೇ ಅವರ ದೇಹದಿಂದ ಕ್ಯಾನ್ಸರ್ ಗಂಟನ್ನು ತೆಗೆದು ಲ್ಯಾಬ್‌ಗೆ ಕಳುಹಿಸುತ್ತೇವೆ. ತೆಗೆದಿರುವ ಗಂಟಿನ ಸುತ್ತಮುತ್ತ ಕ್ಯಾನ್ಸರ್ ಇದೆಯೇ ಎಂದು ಲ್ಯಾಬ್‌ನಲ್ಲಿ ಪರಿಶೀಲಿಸಲಾಗುವುದು. ಒಂದು ವೇಳೆ ಇದ್ದರೆ ನಿರ್ದಿಷ್ಟ ಭಾಗದಲ್ಲಿ ಕ್ಯಾನ್ಸರ್ ಕೋಶವನ್ನು ಬೇರು ಸಹಿತ ಕಿತ್ತು ಹಾಕಲಾಗುವುದು. ಇದರಿಂದ ರೋಗಿಯು ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ತಪ್ಪುತ್ತದೆ. ಈ ವರದಿಯು ಕೇವಲ 30 ರಿಂದ 45 ನಿಮಿಷದಲ್ಲೇ ದೊರೆಯುತ್ತದೆ. ಶಸ್ತ್ರಚಿಕಿತ್ಸೆಯ ನಂತರ ಮತ್ತೆ ಎಲ್ಲಾದರೂ ಕ್ಯಾನ್ಸರ್ ಕೋಶಗಳು ಬೆಳೆಯುತ್ತಿದೆಯೇ ಎಂದು ಅಲ್ಟ್ರಾಸೌಂಡ್ ಸ್ಕ್ಯಾನ್​ ಹಾಗೂ ಪೆಟ್ ಸಿಟಿ ಸ್ಕ್ಯಾನ್​​ ಮೂಲಕ ಪತ್ತೆ ಹಚ್ಚಬಹುದು. ಈ ಎಲ್ಲ ಸೌಲಭ್ಯಗಳು ಒಂದೇ ಸೂರಿನಡಿ ನಮ್ಮ ಆಸ್ಪತ್ರೆಯಲ್ಲಿ ದೊರೆಯುತ್ತಿದೆ. ರೇಡಿಯೇಷನ್, ಕೀಮೋಥೆರಪಿ, ಫ್ರೋಜನ್ ವಿಭಾಗ, ಪೆಟ್ ಸಿಟಿ ಸ್ಕ್ಯಾನ್​, ಅಲ್ಟ್ರಾಸೌಂಡ್ ಸ್ಕ್ಯಾನ್​ ವ್ಯವಸ್ಥೆ ನಮ್ಮಲ್ಲಿ ಇದೆ ಎಂದರು.

ಕ್ಯಾನ್ಸರ್ ಪತ್ತೆ ಹಚ್ಚಲು ಪೆಟ್ ಸ್ಕ್ಯಾನ್​​ ನಿರ್ಣಾಯಕ ಪಾತ್ರ

ಕ್ಯಾನ್ಸರ್ ಪತ್ತೆಹಚ್ಚಲು ಪೆಟ್ ಸಿಟಿ ಸ್ಕ್ಯಾನ್​​ ಮತ್ತು ನ್ಯೂಕ್ಲಿಯರ್ ಮೆಡಿಷನ್ ತುಂಬಾ ಉಪಯುಕ್ತ. ಈ ಪೆಟ್ ಸಿಟಿ ಸ್ಕ್ಯಾನ್​​ ಕೇವಲ ಕ್ಯಾನ್ಸರ್​ ಪತ್ತೆ ಹಚ್ಚುವುದು ಮಾತ್ರವಲ್ಲ ಕ್ಯಾನ್ಸರ್ ಯಾವ ಹಂತದಲ್ಲಿ ಎಂಬುದನ್ನು ಸಹ ತಿಳಿಸುತ್ತದೆ ಎಂದು ನ್ಯೂಕ್ಲಿಯರ್ ಮೆಡಿಷನ್ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಆದರ್ಶ್ ಬಿ. ಯಾದವಾಡ್ ಹೇಳಿದರು.

ಕ್ಲಿಯರ್‌ಮೆಡಿ ಹೆಲ್ತ್‌ಕೇರ್ ಆಸ್ಪತ್ರೆ ಸೇರಿದಂತೆ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಮಾತ್ರ ಪೆಟ್ ಸಿಟಿ ಸ್ಕ್ಯಾನ್​​ ಇದೆ. ದೇಶದ ಒಂದು ಮತ್ತು ಎರಡನೇ ಹಂತದ ನಗರಗಳಲ್ಲಿ ಮಾತ್ರ ಈ ಸೇವೆ ದೊರೆಯುತ್ತಿದೆ. ಕ್ಯಾನ್ಸರ್ ಅನ್ನು ಗುರುತಿಸುವುದು ಹಾಗೂ ಚಿಕಿತ್ಸೆ ನೀಡುವ ವಿಚಾರದಲ್ಲಿ ಪೆಟ್‌ಸಿಟಿ ಸ್ಕ್ಯಾನ್​​ ತುಂಬಾ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿಯೊಂದು ಜಿಲ್ಲೆಗಳಲ್ಲಿ ಪೆಟ್‌ಸಿಟಿ ಸ್ಕ್ಯಾನ್​​ ಅವಶ್ಯಕತೆ ಇದೆ ಎಂದು ಹೇಳಿದರು.

ಯುಎಸ್‌ನಲ್ಲಿ ಪ್ರಥಮ ಬಾರಿಗೆ 1960 ದಶಕದಲ್ಲಿ ಪೆಟ್‌ಸಿಟಿ ಸ್ಕ್ಯಾನ್​ ಬಳಕೆಗೆ ಬಂತು. ಆದರೆ ದೇಶಕ್ಕೆ ಬಂದಿದ್ದು 2002ರಲ್ಲಿ. ಇದೀಗ ಡಿಜಿಟಲ್ ಪೆಟ್ ಸಿಟಿ ಬಂದಿದೆ. ಪೆಟ್‌ಸಿಟಿ ಖರೀದಿ ತುಂಬಾ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಕೆಲವೇ ಕೆಲವು ಆಸ್ಪತ್ರೆಗಳಲ್ಲ್ಲಿ ಮಾತ್ರ ಪೆಟ್‌ಸಿಟಿ ಸ್ಕ್ಯಾನ್​​ಗಳಿವೆ. ಪೆಟ್ ಸಿಟಿ ಸ್ಕ್ಯಾನ್​ನಲ್ಲಿ ರೋಗಿಗೆ ಅತ್ಯಲ್ಪ ಪ್ರಮಾಣದಲ್ಲಿ ನ್ಯೂಕ್ಲಿಯರ್ ಮೆಡಿಷನ್ ನೀಡಿ ಕ್ಯಾನ್ಸರ್​​ ಕೋಶವನ್ನು ಪತ್ತೆ ಹಚ್ಚುತ್ತೇವೆ ಎಂದು ಹೇಳಿದರು.

ನ್ಯೂಕ್ಲಿಯರ್ ಮೆಡಿಷನ್ ಹಾಗೂ ಗ್ಯಾಮಾ ಕ್ಯಾಮರಾ ಬಳಸಿಕೊಂಡು ಬ್ರೈನ್, ಥೈರಾಯ್ಡ, ಲಂಗ್ಸ್, ಹಾರ್ಟ್, ಲಿವರ್, ಹೊಟ್ಟೆ ಭಾಗವನ್ನು ಪತ್ಯೇಕವಾಗಿ ನೋಡಬಹುದು. ರೇಡಿಯಾಲಜಿಯಲ್ಲಿ ಎನಾಟಮಿಕಲ್ ಡಿಫಾಮೆಟಿ ಮಾತ್ರ ಕಾಣುತ್ತದೆ. ಎನಾಟಮಿಕಲ್ ಡಿಫಾಮೆಟಿ ಇರುವ ಅಂಗಾಂಗಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ ಎಂದು ಸೂಕ್ಷ್ಮವಾಗಿ ಹೇಳಲು ರೇಡಿಯಾಲಜಿಯಿಂದ ಸಾಧ್ಯವಿಲ್ಲ. ಆದರೆ, ಈ ಕಾರ್ಯವನ್ನು ಗ್ಯಾಮಾ ಕ್ಯಾಮರಾ ಮಾಡುತ್ತದೆ. ಹೀಗಾಗಿ ಒಂದು ರೋಗಿಯ ಸಂಪೂರ್ಣ ಆರೋಗ್ಯ ಚೇತರಿಕೆಗೆ ನ್ಯೂಕ್ಲಿಯರ್ ಮೆಡಿಷನ್ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದರು.

ಕ್ಲಿಯರ್‌ಮೆಡಿ ಹೆಲ್ತ್‌ಕೇರ್ ನೀಡುತ್ತಿದೆ ಅತ್ಯಾಧುನಿಕ ವೈದ್ಯಕೀಯ ಸೇವೆ

ಕ್ಲಿಯರ್‌ಮೆಡಿ ಹೆಲ್ತ್‌ಕೇರ್ ದೇಶಾದ್ಯಂತ ಅತ್ಯುತ್ತಮ ಆರೋಗ್ಯ ಚಿಕಿತ್ಸೆಗಳನ್ನು ಒದಗಿಸುವ ಮತ್ತು ವೇಗವಾಗಿ ವಿಸ್ತರಿಸುತ್ತಿರುವ ಆರೋಗ್ಯ ಸೇವಾ ಸಂಸ್ಥೆಯಾಗಿದೆ. ಮೈಸೂರಿನಲ್ಲಿ 2 ಸ್ವತಂತ್ರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ಆಂಕೊಲಾಜಿ ಮತ್ತು ತೃತೀಯ ಹಂತದ ಆರೈಕೆಯ ಮೇಲೆ ಕೇಂದ್ರೀಕರಿಸಿದ 15 ಆಸ್ಪತ್ರೆಗಳೊಂದಿಗೆ ಕ್ಲಿಯರ್‌ಮೆಡಿ ಹೆಲ್ತ್‌ಕೇರ್ ಪಾಲುದಾರಿಕೆ ಹೊಂದಿದೆ.

ಕ್ಲಿಯರ್‌ಮೆಡಿ ಹೆಲ್ತ್‌ಕೇರ್‌ನ ಎಲ್ಲ ಆಸ್ಪತ್ರೆಗಳು ಎನ್‌ಎಬಿಎಚ್ (ಆಸ್ಪತ್ರೆಗಳಿಗೆ ರಾಷ್ಟ್ರೀಯ ಮಾನ್ಯತೆ ನೀಡುವ ಮಂಡಳಿ)ನಿಂದ ಮಾನ್ಯತೆ ಪಡೆದಿವೆ. ಕ್ಲಿಯರ್‌ಮೆಡಿ ದೇಶದ ಅತಿದೊಡ್ಡ ಆಂಕೊಲಾಜಿ ಆರೈಕೆ ಪೂರೈಕೆದಾರರಲ್ಲಿ ಒಂದಾಗಿದೆ. ಆಸ್ಪತ್ರೆಯಲ್ಲಿ ಪ್ರತಿವರ್ಷ 500ಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳು ನೋಂದಾಯಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಬಹಳಷ್ಟು ಹೊರ ದೇಶದ ರೋಗಿಗಳು ಸೇರಿದ್ದಾರೆ. ಅತ್ಯಾಧುನಿಕ ಕ್ಲಿನಿಕಲ್ ಆರೈಕೆ ಒದಗಿಸಲು ಆಸ್ಪತ್ರೆಯು ಸೌಲಭ್ಯಗಳನ್ನು ನಿರಂತರವಾಗಿ ನವೀಕರಿಸಿಕೊಂಡು ಬಂದಿದೆ.

ಅತ್ಯುತ್ತಮ ಆಂಕೊಲಾಜಿ ಥೆರಪ್ಯೂಟಿಕ್ಸ್ ಮತ್ತು ಡಯಾಗ್ನೋಸ್ಟಿಕ್ಸ್ ಜತೆಗೆ ಆಸ್ಪತ್ರೆಯು ವೈದ್ಯಕೀಯ ಸೌಲಭ್ಯಗಳಲ್ಲಿ (ಕಾರ್ಡಿಯಾಲಜಿ, ನರವಿಜ್ಞಾನ, ಮೂಳೆಚಿಕಿತ್ಸೆ, ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಇತರ ಸೇವೆಗಳು) ಅನೇಕ ಇತರ ಸೂಪರ್ ಸ್ಪೆಷಾಲಿಟಿಗಳನ್ನು ಹೊಂದಿದೆ.

ಸಮಗ್ರ ಆಂಕೊಲಾಜಿ ಸೇವೆಗಳು

ಆಸ್ಪತ್ರೆಯು ವೈದ್ಯಕೀಯ ಆಂಕೊಲಾಜಿ, ಸರ್ಜಿಕಲ್ ಆಂಕೊಲಾಜಿ, ರೇಡಿಯೇಷನ್ ಆಂಕೊಲಾಜಿ ಸೇವೆ ಹೊಂದಿದೆ. ಕ್ಲಿಯರ್ ಮೆಡಿಯ ಪ್ರಮುಖ ಕೇಂದ್ರಬಿಂದು ಮತ್ತು ಮುಖ್ಯವಾಹಿನಿ ಆಂಕೊಲಾಜಿಯಾಗಿದೆ. ಬಹು ಮಾದರಿ ಆರೈಕೆ ಮತ್ತು ಪ್ರಸಿದ್ಧ ಸಲಹೆಗಾರರ ತಂಡದೊಂದಿಗೆ ಉನ್ನತ ದರ್ಜೆಯ ತಂತ್ರಜ್ಞಾನ ಹೊಂದಿದೆ. ಎಲ್ಲ ಆಂಕೊಲಾಜಿ ವಿಶೇಷತೆಗಳು ಒಂದೇ ಸೂರಿನಡಿ ಲಭ್ಯವಿರುವ ಕ್ಲಿಯರ್ ಮೆಡಿಯಲ್ಲಿ ಅಂತಾರಾಷ್ಟ್ರೀಯ ಪ್ರೋಟೋಕಾಲ್‌ಗಳ ಪ್ರಕಾರ ರೋಗಿಗಳಿಗೆ ಹೆಚ್ಚು ಮುಂದುವರಿದ ಮತ್ತು ವೈಜ್ಞಾನಿಕ ಕ್ಯಾನ್ಸರ್ ಚಿಕಿತ್ಸೆ ಒದಗಿಸುತ್ತಿದೆ.

ವೈದ್ಯಕೀಯ ಆಂಕೊಲಾಜಿ, ಸರ್ಜಿಕಲ್ ಆಂಕೊಲಾಜಿ, ವಿಕಿರಣ ಆಂಕೊಲಾಜಿ ಡಯಾಗ್ನೋಸ್ಟಿಕ್ ಇಮೇಜಿಂಗ್ ಮತ್ತು ನ್ಯೂಕ್ಲಿಯರ್ ಮೆಡಿಸಿನ್, ಎಕ್ಸರೇ, ಐಯುಎಸಿ, ಐಸಿಟಿಐ, ಎಂಆರ್‌ಐ, ಪಿಇಟಿ, ಸಿಟಿ ಗ್ಯಾಮಾ ಕ್ಯಾಮರಾಗಳೊಂದಿಗೆ ಅತ್ಯಾಧುನಿಕ ಆಂಕೊಲಾಜಿ ಆರೈಕೆ ಮತ್ತು ರೋಗನಿರ್ಣಯ ರೇಡಿಯಾಲಜಿ ಪರಿಹಾರಗಳನ್ನು ಒದಗಿಸುವಲ್ಲಿ ಪರಿಣತಿಯನ್ನು ಹೊಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ರೋಗನಿರ್ಣಯ ಉಪಕರಣಗಳನ್ನು ಆಂಕೊಲಾಜಿ, ನ್ಯೂಕ್ಲಿಯರ್ ಮೆಡಿಸಿನ್ ಮತ್ತು ರೇಡಿಯಾಲಜಿಯಲ್ಲಿನ ಅತ್ಯುತ್ತಮ ತಂತ್ರಜ್ಞಾನಗಳೊಂದಿಗೆ ಕಾನ್ಫಿಗರ್ ಮಾಡಲಾಗಿದೆ.

3 ಟೆಸ್ಲಾ ಎಂಆರ್‌ಐ, 128 ಸ್ಪೈಸ್ ಸಿಟಿ ಸ್ಕಾೃನರ್, ಟೈಮ್ ಆಫ್ ಫ್ಲೈಟ್ ಪಿಇಟಿ ಸಿಟಿಗಳು ಹೈ ಎಂಡ್ ಆಲ್ಪ್ರಾಸೌಂಡ್, ಡಿಜಿಟಲ್ ಎಕ್ಸ್ ರೇಗಳು ಇತ್ಯಾದಿಗಳೊಂದಿಗೆ ಸ್ವಾವಲಂಬಿ ರೇಡಿಯೇಶನ್ ಆಂಕೊಲಜಿ ವಿಭಾಗಗಳನ್ನು ಮತ್ತು ಉನ್ನತ ಮಟ್ಟದ ಲೀನಿಯರ್ ಆಕ್ಸಿಲರೇಟರ್‌ಗಳು ಮತ್ತು ಅತ್ಯಾಧುನಿಕ ಯೋಜನಾ ವ್ಯವಸ್ಥೆಗಳೊಂದಿಗೆ ವಿಕಿರಣ ಆಂಕೊಲಜಿ ವಿಭಾಗವನ್ನು ಸ್ಥಾಪಿಸಲಾಗಿದೆ.

ಆದರ್ಶ್​​ ಬಿ ಯಾದವಾಡ್​​, ನ್ಯೂಕ್ಲಿಯರ್​ ಮೆಡಿಷನ್​ ವಿಭಾಗದ ಸೀನಿಯರ್​ ಕನ್ಸಲ್ಟೆಂಟ್​​

ಡಾ, ಸಿ.ಬಿ. ಅವಿನಾಶ್​​, ಮೆಡಿಕಲ್​ ಆಂಕೋಲಾಜಿ ಎಚ್​ಒಡಿ ಮತ್ತು ಸೀನಿಯರ್ ಕನ್ಸಲ್ಟೆಂಟ್​​​

ಡಾ. ಚೈತ್ರಾ ಕಟಕೊಳ, ರೇಡಿಯೇಷನ್​ ಆಂಕೊಲಾಜಿಸ್ಟ್​

ಡಾ. ನವೀನ್​​, ಸರ್ಜಿಕಲ್​ ಆಂಕೊಲಾಜಿಸ್ಟ್​​