ಕಾರ್ಕಳ: ಮಣಿಪಾಲದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಜರುಗಿದ 3ನೇ ಆವೃತ್ತಿಯ ಕೆನರಾ ಮ್ಯಾರಥಾನ್‌ನಲ್ಲಿ ನಿಟ್ಟೆ ಕ್ರೀಡಾಪಟುಗಳು ಹಲವಾರು ಪದಕಗಳು ಮತ್ತು ನಗದು ಬಹುಮಾನ ಪಡೆದಿದ್ದಾರೆ.
ಡಾ.ಎನ್.ಎಸ್.ಎ.ಎಂ ಪ್ರಥಮದರ್ಜೆ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿನಿ ನಂದಿನಿ ಹಾಫ್ ಮ್ಯಾರಥಾನ್ (ಮುಕ್ತ ವಿಭಾಗ)ನಲ್ಲಿ ಚಿನ್ನದ ಪದಕ ಪಡೆದರು. ತೃತೀಯ ಬಿಕಾಂ ವಿದ್ಯಾರ್ಥಿನಿ ಪ್ರತೀಕ್ಷಾ 3ಕಿ.ಮೀ (ಮುಕ್ತ ವಿಭಾಗ) ಚಿನ್ನದ ಪದಕ, ಡಾ.ಎನ್.ಎಸ್.ಎ.ಎಂ ಪ್ರೌಢಶಾಲೆ 8ನೇ ತರಗತಿ ವಿದ್ಯಾರ್ಥಿನಿ ದೀಪಿಕಾ 3ಕಿ.ಮೀ (ಜೂನಿಯರ್ ವಿಭಾಗ) ವಿಭಾಗದಲ್ಲಿ ಬೆಳ್ಳಿ ಪದಕ, 9ನೇ ತರಗತಿ ರಕ್ಷಿತ್ ಕಂಚಿನ ಪದಕ ಪಡೆದಿದ್ದಾರೆ.