ತೆಂಕ ಎರ್ಮಾಳಿನಲ್ಲಿ ಆಯೋಜಿಸಿರುವ ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರವನ್ನು ಈಶಪ್ರಿಯ ಶ್ರೀಗಳು ಉದ್ಘಾಟಿಸಿದರು.  
ಜಿಲ್ಲೆ

ಎನ್ನೆಸ್ಸೆಸ್‌ನಲ್ಲಿ ಸಹಬಾಳ್ವೆಗೆ ತರಬೇತಿ

ಇಂದಿರಾ ಎನ್ ಕೆ

ಪಡುಬಿದ್ರಿ: ಎನ್ನೆಸ್ಸೆಸ್ ಶಿಬಿರದಲ್ಲಿ ಸಹಬಾಳ್ವೆ ನಡೆಸಲು ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಗಳು ಹೇಳಿದರು.

ತೆಂಕ ಎರ್ಮಾಳು ಸರ್ಕಾರಿ ಸಯುಕ್ತ ಪ್ರೌಢಶಾಲೆಯಲ್ಲಿ ಮಂಗಳವಾರ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷ ವೈ. ಸುಧೀರ್‌ಕುಮಾರ್, ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ ಗೌರವ ಕೋಶಾಧಿಕಾರಿ ಸಿಎ ಗಣೇಶ ಹೆಬ್ಬಾರ್, ಸರ್ಕಾರಿ ಸಯುಕ್ತ ಪ್ರೌಢಶಾಲೆ ಮುಖ್ಯಶಿಕ್ಷಕಿ ಸುಗುಣಾ ಶುಭಹಾರೈಸಿದರು.

ಆಡಳಿತ ಮಂಡಳಿ ಪ್ರತಿನಿಧಿ ಪ್ರೊ.ನಿತ್ಯಾನಂದ, ಪ್ರಾಂಶುಪಾಲ ಸಂಜೀವ ನಾಯ್ಕ, ಎನ್ನೆಸ್ಸೆಸ್ ನೋಡಲ್ ಅಧಿಕಾರಿ ಜಯಶಂಕರ ಕಂಗಣ್ಣಾರು ಉಪಸ್ಥಿತರಿದ್ದರು. ನಿತೀಶಾ ಸ್ವಾಗತಿಸಿದರು. ಕಾರ್ತಿಕ್ ವಂದಿಸಿದರು. ಮನೀಶ್ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಯಕ್ಷ ಛಾಯಾಗ್ರಾಹಕ ಮನೋಹರ್ ಎಸ್.ಕುಂದರ್ ಅವರ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ.