ಜಿಲ್ಲೆ

ಗುರಿ ತಲುಪಲು ಶ್ರೇಷ್ಠ ಪ್ರಯತ್ನ ಅಗತ್ಯ: ಮಾಜಿ ಸೈನಿಕ ಹವಲ್ದಾರ್ ಅಚಲ ಎಂ.ಜಿ. ಅಭಿಪ್ರಾಯ

ಸೌಮ್ಯ ಆರ್

ಬದಿಯಡ್ಕ: ಸೇನೆಯಲ್ಲಿ ಅನೇಕ ವಿಭಾಗಗಳಿವೆ. ಪ್ರತಿಯೊಬ್ಬನಿಗೂ ತನ್ನದೇ ಆದ ಜವಾಬ್ದಾರಿ ಇರುತ್ತದೆ. ಆದರೆ ಒಂದು ತಂಡದ ವ್ಯವಸ್ಥೆ ಇನ್ನೊಂದು ತಂಡಕ್ಕೆ ಗೊತ್ತಿರುವುದಿಲ್ಲ. ರಕ್ಷಣಾ ವಿಚಾರದಲ್ಲಿ ಯಾವುದೇ ರಾಜಿ ಇರುವುದಿಲ್ಲ. ನಿರ್ದಿಷ್ಟ ಗುರಿ ತಲುಪಲು ನಮ್ಮ ಶ್ರೇಷ್ಠ ಪ್ರಯತ್ನ ಇರಬೇಕು ಎಂದು ಮಾಜಿ ಸೈನಿಕ ಹವಲ್ದಾರ್ ಅಚಲ ಎಂ.ಜಿ.ಪುತ್ರಕಳ ಹೇಳಿದರು.

ಶ್ರೀ ರಾಮಚಂದ್ರಾಪುರ ಮಠದ ಮುಳ್ಳೇರಿಯ ಹವ್ಯಕ ಮಂಡಲ ನೇತೃತ್ವದಲ್ಲಿ ಬದಿಯಡ್ಕ ಶ್ರೀ ಭಾರತಿ ವಿದ್ಯಾಪೀಠದಲ್ಲಿ ಸೋಮವಾರ ಜೀವನ ಬೋಧ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಶಿಬಿರಾಧಿಕಾರಿ ಡಾ.ಬೇ.ಸೀ.ಗೋಪಾಲಕೃಷ್ಣ ಭಟ್, ಮುಳ್ಳೇರಿಯ ಹವ್ಯಕ ಮಂಡಲ ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ, ಡಾ.ವೈ.ವಿ.ಕೃಷ್ಣಮೂರ್ತಿ ಉಪಸ್ಥಿತರಿದ್ದರು. ಶ್ರೀ ರಾಮಚಂದ್ರಾಪುರ ಮಠದ ಮಾತೃತ್ವಂ ಪ್ರಧಾನರಾದ ಈಶ್ವರಿ ಬೇರ್ಕಡವು ಹಪ್ಪಳ ತಯಾರಿ ಕುರಿತು ಮಾತನಾಡಿದರು. ಮಂಡಲ ವಿದ್ಯಾರ್ಥಿವಾಹಿನಿಯ ಶ್ಯಾಮಪ್ರಸಾದ ಕುಳಮರ್ವ ಸ್ವಾಗತಿಸಿದರು.