ಜಿಲ್ಲೆ

ಬೃಹತ್ ರೈತ ಹೋರಾಟಕ್ಕೆ ಕರೆ

ಇಂದಿರಾ ಎನ್ ಕೆ

ಕೋಟ: ಮಡಿವಾಳ ಸಾಲು ಹೊಳೆಯಲ್ಲಿ ಹೂಳು ತುಂಬಿದ ಪರಿಣಾಮ ತೆಕ್ಕಟ್ಟೆ ಉಳ್ತೂರು, ಬೇಳೂರು, ಗಿಳಿಯಾರು, ಕಾರ್ತಟ್ಟು ಚಿತ್ರಪಾಡಿ, ಬನ್ನಾಡಿ ಉಪ್ಲಾಡಿ, ಸಾಲಿಗ್ರಾಮ ವ್ಯಾಪ್ತಿಯ ರೈತರು ಹಲವಾರು ವರ್ಷಗಳಿಂದ ಕೃತಕ ನೆರೆ ಹಾವಳಿ ಸಮಸ್ಯೆ ಎದುರಿಸುತ್ತಿದ್ದಾರೆ.

ಪರಿಹಾರಕ್ಕಾಗಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮೇ 13ರಂದು ಬೃಹತ್ ರೈತ ಚಳವಳಿಗೆ ಕೋಟ ಹಸಿರು ಸೇನೆ ಕರೆ ನೀಡಿದೆ.

ಇಲ್ಲಿನ ಮಾಂಗಲ್ಯ ಮಂದಿರದಲ್ಲಿ ಈ ಭಾಗದ ರೈತ ಪ್ರಮುಖರು ಸಭೆ ನಡೆಸಿ ಹೋರಾಟದ ನಿರ್ಧಾರ ಕೈಗೊಂಡರು. ಮೇ 13ರಂದು ಕೋಟ ಬನ್ನಾಡಿ ರಾಜ್ಯ ಹೆದ್ದಾರಿಯಲ್ಲಿ ರಾಜ್ಯಮಟ್ಟದ ರೈತ ನಾಯಕರ ನೇತೃತ್ವದಲ್ಲಿ ಪ್ರತಿಭಟನಾ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಹಿರಿಯರಾದ ಭರತ್ ಕುಮಾರ್ ಶೆಟ್ಟಿ, ಶ್ಯಾಮಸುಂದರ್ ನಾಯಿರಿ, ಪ್ರಶಾಂತ್ ಶೆಟ್ಟಿ ಉಳ್ತೂರು, ಅಜಿತ್ ದೇವಾಡಿಗ ಕೋಟ, ಚಂದ್ರ ಪೂಜಾರಿ ಕದ್ರಿಕಟ್ಟು, ರವೀಂದ್ರ ಐತಾಳ್, ವಸಂತ ಗಿಳಿಯಾರು, ರಾಜಾರಾಮ್ ಶೆಟ್ಟಿ ಗಿಳಿಯಾರು, ಪ್ರಸಾದ್ ಬಿಲ್ಲವ, ಬೇಳೂರು ದಿನೇಶ್ ಶೆಟ್ಟಿ, ಗಿರೀಶ್ ಗಾಣಿಗ ಬೆಟ್ಲಕ್ಕಿ, ಸಂತೋಷ ಪೂಜಾರಿ ಕಂಬಳ ಗೆದ್ದೆ, ಲಲಿತಾ ಪೂಜಾರ್ತಿ, ಶೇಖರ್ ಗಿಳಿಯಾರು, ಜಡ್ಡಾಡಿ ವಿಜಯ್ ಕುಮಾರ್ ಶೆಟ್ಟಿ, ಅರುಣ್ ಶೆಟ್ಟಿ ಪಡುಮನೆ, ರಾಜು ಕಾರ್ಕಡ ಮತ್ತಿತರರು ಇದ್ದರು.