ಜಿಲ್ಲೆ

ಬೆಳಗಾವಿಯಿಂದ ಬೆಂಗಳೂರಿಗೆ ಸಿ.ಟಿ.ರವಿ ದಿಢೀರ್​ ಶಿಫ್ಟ್; ಕಾರಣ ಹೀಗಿದೆ | C.T.Ravi Arrest

ಬೆಂಗಳೂರು: ಅಧಿವೇಶನದ ವೇಳೆ ಮಾತಿನ ಚಕಮಕಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳ‌ರ್ ವಿರುದ್ಧ ಸಿ.ಟಿ.ರವಿ ಅಸಂವಿಧಾನಿಕ ಪದವನ್ನು ಬಳಸಿದ್ದಾರೆ ಎಂಬ ಆರೋಪದ ಮೇಲೆ(C.T.Ravi Arrest)ಬಂಧಿಸಿಲಾಗಿದ್ದು, ಬೆಳಗಾವಿ ಕೋರ್ಟ್​ ಬಳಿಕ ಇದೀಗ ಬೆಂಗಳೂರಿಗೆ ಕರೆ ತರಲಾಗುತ್ತದೆ.

ನ್ಯಾಯಾಧೀಶೆ ಸ್ಪರ್ಶಾ ಡಿಸೋಜಾ ನೇತೃತ್ವದಲ್ಲಿ ವಿಚಾರಣೆ ನಡೆದ ಬಳಿಕ ಬೇಲ್ ಅರ್ಜಿ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್​ಗೆ ವರ್ಗಾವಣೆ ಮಾಡಿದೆ. ಬೆಂಗಳೂರಿನ ಸಿಸಿಎಚ್​ 82ನೇ ಕೋರ್ಟ್​ಗೆ ಪ್ರಕರಣ ವರ್ಗಾವಣೆಯಾಗಿದೆ. ಅಲ್ಲದೆ, ಗೌರವದಿಂದ ಆರೋಪಿಯನ್ನು ಕರೆದುಕೊಂಡು ಹೋಗಬೇಕು. 24 ಗಂಟೆಯೊಳಗೆ ಆರೋಪಿಯನ್ನು ಕೋರ್ಟ್​ಗೆ ಹಾಜರು ಪಡಿಸಬೇಕು ಎಂದು ಸೂಚನೆ ನೀಡಿದೆ. ಈ ಹಿನ್ನಲೆ ಸಿ.ಟಿ ರವಿಯನ್ನು ಬೆಂಗಳೂರಿಗೆ ಕರೆ ತರಲಾಗುತ್ತದೆ.

ಬೆಳಗಾವಿ ಕೋರ್ಟ್​ನಲ್ಲಿ ಹೇಳಿದ್ದೇನು?

ಇನ್ನು ಬೆಳಗಾವಿ ಜಿಲ್ಲಾ 5ನೇ ಹೆಚ್ಚುವರಿ ನ್ಯಾಯಾಲದದಲ್ಲಿ ಸದ್ಯ ಸಿ.ಟಿ ರವಿ ಪರ ವಕೀಲ ಎಂ.ಬಿ.ಜಿರಲಿ ವಾದ ಮಂಡಿಸಿದ್ದಾರೆ. ಈ ವೇಳೆ ಸಿಟಿ ರವಿ ಪೊಲೀಸರ ವಿರುದ್ಧ ಹಲವು ಆರೋಪಗಳನ್ನ ಮಾಡಿದ್ದಾರೆ. ಪೊಲೀಸರಿಂದ ನನಗೆ ಜೀವ ಬೆದರಿಕೆ ಇದೆ ಅಂತ ನ್ಯಾಯಾಧೀಶರ ಮುಂದೆ ಹೇಳಿದ್ದಾರೆ. ರವಿ ಪರ ವಕೀಲರು ಮಧ್ಯಂತರ ಜಾಮೀನು ಕೊಡುವಂತೆ ಮನವಿ ಮಾಡಿದ್ದು, 3 ಗಂಟೆಗೆ ತೀರ್ಪು ಕಾಯ್ದಿರಿಸಲಾಗಿತ್ತು. ಆದರೆ ಕೋರ್ಟ್​ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್​ಗೆ ವರ್ಗಾವಣೆ ಮಾಡಿದೆ.