ಜಿಲ್ಲೆ

Bus overturned: ಹೆಬ್ಬುಳ ಬಳಿ ಬಸ್‌ ಪಲ್ಟಿ 7 ಜನರಿಗೆ ಗಾಯ

Uttara Kannada - Subash Hegde

ಕಾರವಾರ Bus overturned: ಬಸ್ ಪಲ್ಟಿಯಾಗಿ 7 ಸವಾರರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಅಂಕೋಲಾ ಹೆಬ್ಬುಳ ಸಮೀಪ ಮಂಗಳವಾರ ಬೆಳಗಿನಜಾವ ನಡೆದಿದೆ. ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಬರುತ್ತಿದ್ದ ವೇಳೆ ಗಣೇಶ ಟ್ರಾವೆಲ್ಸ್ ಸ್ಲೀಪರ್ ಬಸ್ ಓವರ್ ಟೇಕ್ ಮಾಡಲು ಹೋಗಿ ಎದುರಿನಿಂದ ಬರುತ್ತಿದ್ದ ಎಚ್‌ಪಿ ಗ್ಯಾಸ್ ಟ್ಯಾಂಕರ್‌ಗೆ ಹೊಡೆದು ಡಿಕ್ಕಿಯಾಗಿತ್ತು.

Bus overturned

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಂಜುಳಾ ನಿಂಗಪ್ಪ ಆಲಮೇಲ್, ಮಿಜಾಜ ಶೇಖ, ಗುರುಲಿಂಗಪ್ಪ ಮಿರ್ಜಿ , ಶ್ರೀಶೈಲ ಸಿದ್ದಪ್ಪ ಕುಂಚಗನೂರು, ಬೀಮಾಬಾಯಿ ನಿಂಗಪ್ಪ ಆಲಮೇಲ್, ಗುರುಬಾಯಿ ಸಿದ್ದಪ್ಪ ಲೋಣಿ, ರಾಘವೇಂದ್ರ ನಿಂಗಪ್ಪ ಆಲಮೇಲ್ ಗಾಯಗೊಂಡಿದ್ದಾರೆ. ಬಸ್ ಚಾಲಕ ಕಾರ್ಕಳದ ರಾಘವೇಂದ್ರ ನರಸಿಂಹ ಜೋಡುಕಟ್ಟೆ ವಿರುದ್ಧ ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.