ಜಿಲ್ಲೆ

ಬಸ್ಸು, ಜೀಪು ಡಿಕ್ಕಿ, ಜಖಂ

ಇಂದಿರಾ ಎನ್ ಕೆ

ಸುಳ್ಯ: ನಗರದ ಓಡಬಾಯಿ ಸಮೀಪ ಖಾಸಗಿ ಬಸ್ಸು ಹಾಗೂ ಜೀಪು ಡಿಕ್ಕಿಹೊಡೆದ ಘಟನೆ ಭಾನುವಾರ ಸಂಜೆ ನಡೆದಿದೆ.
ಬಸ್ಸು ಹಾಗೂ ಜೀಪಿನ ಎದುರು ಭಾಗಕ್ಕೆ ಹಾನಿಯಾಗಿದ್ದು ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.