ಜಿಲ್ಲೆ

ಸೌದಿ ಬಸ್‌ನಲ್ಲಿ ‘ಬೆದ್ರ’ ಅಭಿಮಾನ : ಕಲ್ಲಬೆಟ್ಟುವಿನ ಮೊಹ್ಮದ್ ಆಲಿ ಹುಟ್ಟೂರ ಪ್ರೀತಿ

ಸೌಮ್ಯ ಆರ್

ಮೂಡುಬಿದಿರೆ: ಸೌದಿ ಅರೇಬಿಯಾದ ಜುಬೈಲ್‌ನಲ್ಲಿ ಬಸ್ ಓಡಿಸುತ್ತಿರುವ ಮೂಡುಬಿದಿರೆ ಕಲ್ಲಬೆಟ್ಟುವಿನ ಮೊಹ್ಮದ್ ಆಲಿ ಎಂಬುವರು ತಮ್ಮ ಬಸ್ ಹಿಂಬದಿ ಗಾಜಿನಲ್ಲಿ ‘ಬೆದ್ರ’ (ಮೂಡುಬಿದಿರೆ) ಎಂದು ಕನ್ನಡದಲ್ಲಿ ಬರೆದು ಹುಟ್ಟೂರಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಸೌದಿಯಲ್ಲಿ ಮೊಹ್ಮದ್ ಆಲಿ ಸ್ವಂತ ಬಸ್ ಹೊಂದಿದ್ದು ಮಕ್ಕಾ, ಮದೀನಾದಂತಹ ಪವಿತ್ರ ಕ್ಷೇತ್ರಕ್ಕೆ ಯಾತ್ರಾರ್ಥಿಗಳನ್ನು ಬಾಡಿಗೆಗೆ ಕರೆದೊಯ್ಯುತ್ತಿದ್ದಾರೆ. ಉಳಿದ ಸಮಯಗಳಲ್ಲಿ ಕಂಪೆನಿಗಳ ಕೆಲಸಗಳಿಗೆ ಬಸ್ ಬಾಡಿಗೆಗೆ ಕೊಡುತ್ತಾರೆ. ಕಲ್ಲಬೆಟ್ಟು ಗ್ರಾಮದ ಪಿಲಿಪಂಜರದ ಮೊಹ್ಮದ್ ಹುಟ್ಟೂರಿನಲ್ಲಿ ಹಲವು ವರ್ಷ ಆಟೋ ಓಡಿಸುತ್ತಿದ್ದರು. ಬಳಿಕ ಸೌದಿಗೆ ತೆರಳಿ ಅಲ್ಲಿ ಬಸ್ ಓಡಿಸುವ ಕೆಲಸ ಮಾಡುತ್ತಿದ್ದಾರೆ.

ನಾನು ಪ್ರಸ್ತುತ ಕೆಲಸ ಮಾಡುತ್ತಿರುವ ಸೌದಿಯ ಜುಬೈಲ್‌ನಲ್ಲಿ ತುಂಬಾ ಮಂದಿ ಮೂಡುಬಿದಿರೆಯ ಸ್ನೇಹಿತರಿದ್ದಾರೆ. ಹುಟ್ಟೂರಿನ ಪ್ರೀತಿ, ಅಭಿಮಾನದಿಂದ ನನ್ನ ಬಸ್‌ನಲ್ಲಿ ‘ಬೆದ್ರ’ ಎಂಬ ಹೆಸರು ಬರೆದಿದ್ದೇನೆ ಮೊಹ್ಮದ್ ಆಲಿ