ಜಿಲ್ಲೆ

ಪ್ರಭುತ್ವ ಮಾದರಿಯಲ್ಲಿ ಬೆಂಗಳೂರು ನಿರ್ಮಾಣ

ಇಂದಿರಾ ಎನ್ ಕೆ

ಬ್ರಹ್ಮಾವರ: ಕೋಟೆ, ಪೇಟೆ ಪರಿಸರ ಜಲಾಶಯಗಳಿಗೆ ಹೆಚ್ಚು ಮಹತ್ವ ನೀಡಿ ಪ್ರಭುತ್ವ ವಾದರಿಯಲ್ಲಿ ಬೆಂಗಳೂರನ್ನು ನಿರ್ಮಿಸಿದವರು ನಾಡಪ್ರಭು ಕೆಂಪೇಗೌಡರು ಎಂದು ಉಪನ್ಯಾಸಕ ಡಾ.ಚೇತನ್‌ಕುವಾರ್ ಶೆಟ್ಟಿ ಹೇಳಿದರು.

ಬ್ರಹ್ಮಾವರ ತಾಲೂಕು ಆಡಳಿತದ ವತಿಯಿಂದ ನಾರಾಯಣ ಗುರು ಸಭಾ ಭವನದಲ್ಲಿ ಶುಕ್ರವಾರ ನಡೆದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಎಸ್.ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ, ಗಾನ ನಮನ ಜರುಗಿತು. ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಎಚ್.ವಿ.ಇಬ್ರಾಹಿಂಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್, ಕಂದಾಯ ನಿರೀಕ್ಷಕ ರಾಜು ಉಪಸ್ಥಿತರಿದ್ದರು. ನಿತ್ಯಾನಂದ ಶೆಟ್ಟಿ ಸ್ವಾಗತಿಸಿದರು. ಪ್ರಮೀಳಾ ಶೆಟ್ಟಿ ವಂದಿಸಿದರು. ಸತೀಶ್‌ಚಂದ್ರ ಶೆಟ್ಟಿ ಚಿತ್ರಪಾಡಿ ನಿರೂಪಿಸಿದರು.