ಬೆಳಗಾವಿ: ಹಾಡಹಗಲೇ ಕಾರೊಂದರ ಗಾಜನ್ನು ಒಡೆದ ದುಷ್ಕರ್ಮಿಗಳು, ಕಾರೊಳಗಿದ್ದ 10 ಲಕ್ಷ ರೂ. ಎಗರಿಸಿಕೊಂಡು ಪರಾರಿಯಾಗಿದ್ದಾರೆ. ಬೆಳಗಾವಿಯಲ್ಲಿನ ಸಬ್ ಜೈಲೊಂದರ ಮುಂದೆಯೇ ಇಂಥದ್ದೊಂದು ಪ್ರಕರಣ ನಡೆದಿದೆ.
ಬೆಳಗಾವಿಯ ಗೋಕಾಕ್ನ ಸಬ್ ಜೈಲ್ ಮುಂದೆ ನಿಲ್ಲಿಸಿದ್ದ ಇನ್ನೋವಾ ಕಾರಿನ ಗಾಜು ಒಡೆದ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಮುತ್ತುನಂದಿ ಎಂಬುವವರು ಹಣ ಕಳೆದುಕೊಂಡಿದ್ದಾರೆ. ಕಾರಿನಲ್ಲಿ ಹಣವಿದ್ದ ಬ್ಯಾಗ್ ಸೇರಿಸಿ ಮತ್ತೆ ಹಣ ವಿತ್ಡ್ರಾ ಮಾಡಲು ಹೋಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಹಣವನ್ನು ದೋಚಿದ್ದಾರೆ.
ಹಣ ಕಳೆದುಕೊಂಡ ಮುತ್ತುನಂದಿ ಕೂಡಲೇ ಗೋಕಾಕ್ ಶಹರ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.