ಹುಬ್ಬಳ್ಳಿ: ಕರೊನಾ ಸೋಂಕು ತಡೆಗೆ ವಿಧಿಸಲಾಗಿದ್ದ ಲಾಕ್ಡೌನ್ ಅನ್ನು ಹಂತ ಹಂತವಾಗಿ ತೆರವುಗೊಳಿಸಲು ಮುಂದಾಗಿರುವ ಸರ್ಕಾರ, ಮದ್ಯಮಾರಾಟಕ್ಕೆ ಅನುಮತಿ ಕೊಟ್ಟ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆಯೇ ಮದ್ಯದಂಗಡಿಗಳ ಎದುರು ಮದ್ಯಪ್ರಿಯರು ಸರದಿ ನಿಂತಿರುವುದು ಕಂಡುಬಂತು.
ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿ ಮಳಿಗೆಗಳ ಎದುರು ದೊಡ್ಡ ಸರದಿಯೇ ಕಂಡುಬಂದಿದೆ. ನಗರದ 150 ಮಳಿಗೆಗಳ ಪೈಕಿ 38 ಮದ್ಯ ಮಾರಾಟ ಮಳಿಗೆಗಳಿಗೆ ಅನುಮತಿ ಸಿಕ್ಕಿದೆ. ಸರ್ಕಾರದ ನಿರ್ದೇಶನದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಮದ್ಯ ಮಾರಾಟಕ್ಕೆ ಮಳಿಗೆಗಳು ವ್ಯವಸ್ಥೆ ಮಾಡಿಕೊಂಡಿವೆ.
ಸೋಮವಾರ ಬೆಳಗ್ಗೆಯಿಂದಲೇ ಮದ್ಯಖರೀದಿಗಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಸರದಿ ನಿಂತಿದ್ದರು ಮದ್ಯವ್ಯಸನಿಗಳು. ಸರ್ಕಾರದ ನಿಯಮದಂತೆ ಮದ್ಯಪ್ರಿಯರಲ್ಲಿ ಮಳಿಗೆಗಳ ಮಾಲೀಕರು ಮನವಿ ಮಾಡಿಕೊಂಡಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮನವರಿಕೆ ಮಾಡಿಕೊಳ್ಳುತ್ತಿದ್ದಾರೆ.