ಸುಳ್ಯ: ನಾರಾಯಣಗುರುಗಳು ಇಡೀ ವಿಶ್ವಕ್ಕೆ ಮಾನವತವಾದವನ್ನು ಸಾರಿದವರು. ಅವರ ಆದರ್ಶಗಳನ್ನು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿಯಲ್ಲಿ ಬುಧವಾರ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ.ಮುಸ್ತಫಾ, ಪಪಂ ಅಧ್ಯಕ್ಷೆ ಶಶಿಕಲಾ ಎ.ನೀರಬಿದಿರೆ, ತಹಸೀಲ್ದಾರ್ ಮಂಜುಳಾ ಎಂ., ಬ್ರಹ್ಮಶ್ರಿ ನಾರಾಯಣಗುರು ಸ್ವಾಮಿ ಬಿಲ್ಲವ ಸಂ ಅಧ್ಯಕ್ಷ ಕೃಷ್ಣಕುಮಾರ್ ಎ.ಅಲೆಕ್ಕಾಡಿ ಮೊದಲಾದವರಿದ್ದರು. ಉಪ ತಹಸೀಲ್ದಾರ್ ಚಂದ್ರಶೇಖರ ಸ್ವಾಗತಿಸಿದರು. ಬ್ರಹ್ಮಶ್ರಿ ನಾರಾಯಣಗುರು ಸ್ವಾಮಿ ಬಿಲ್ಲವ ಸಂದ ನವೀನ್ ಸಾರಕೆರೆ ವಂದಿಸಿದರು.