ಜಿಲ್ಲೆ

ಮಾರ್ಚ್ 6ರಂದು ವೆಂಕಟರಮಣ ಕ್ಷೇತ್ರದಲ್ಲಿ ಬ್ರಹ್ಮರಥೋತ್ಸವ

ಇಂದಿರಾ ಎನ್ ಕೆ

ಗಂಗೊಳ್ಳಿ: ಮಲ್ಯರ ಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಮಾರ್ಚ್ 6ರಂದು ಬ್ರಹ್ಮರಥೋತ್ಸವ ನಡೆಯಲಿದೆ.

ಮಾರ್ಚ್ 2ರಂದು ಮಹಾಪ್ರಾರ್ಥನೆಯೊಂದಿಗೆ ಬ್ರಹ್ಮರಥೋತ್ಸವದ ಧಾರ್ಮಿಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಜಲಾನಯನ, ಮೃತ್ತಿಕಾಹರಣ, ಅಂಕುರಾಹೋಹಣ, ಧ್ವಜಾರೋಹಣ, ಯಜ್ಞವಿಧಿ ನೆರವೇರಲಿದೆ. 7ರಂದು ಧ್ವಜ ಅವರೋಹಣದೊಂದಿಗೆ ಸಂಪನ್ನಗೊಳ್ಳಲಿದೆ. 4ರಂದು ರಾತ್ರಿ ಬಂಡಿ ಉತ್ಸವ, 5ರಂದು ರಾತ್ರಿ ಹೂವಿನ ತೇರು, 6ರಂದು ಸಂಜೆೆ 4 ಗಂಟೆಗೆ ಬ್ರಹ್ಮರಥೋತ್ಸವ, 7ರಂದು ಅವಭೃತ ಉತ್ಸವ, ಧ್ವಜ ಅವರೋಹಣ, ರಾತ್ರಿ 9 ಗಂಟೆಗೆ ಪಂಚಗಂಗಾವಳಿ ನದಿಯಲ್ಲಿ ದೇವರ ನಿರಾಟ ಉತ್ಸವ ಜರುಗಲಿದೆ. ರಥೋತ್ಸವ ಅಂಗವಾಗಿ ಹಗಲು ಉತ್ಸವ, ರಾತ್ರಿ ಪಲ್ಲಕಿ ಉತ್ಸವ, ವಿಶೇಷ ಪೂಜೆ ಪುನಸ್ಕಾರ, ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.