ಕಿನ್ನಿಗೋಳಿ: ತಾಳಿಪಾಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮಠದಲ್ಲಿ 2025ರ ಜನವರಿಯಿಂದ ಫೆಬ್ರವರಿ 5ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ ಇತ್ತೀಚೆಗೆ ದೇಗುಲದ ಪ್ರಾಂಗಣದಲ್ಲಿ ದೇವಸ್ಥಾನದ ಅಧ್ಯಕ್ಷ ದಯಾನಂದ ಭಟ್ ಅಧ್ಯಕ್ಷತೆಯಲ್ಲಿ ನಡೆಯಿತು.
ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷ ಮಠ ಆನಂದ ರಾವ್, ಅಧ್ಯಕ್ಷರಾಗಿ ದಯಾನಂದ ಭಟ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕುಶಲ ಪೂಜಾರಿ ಅವರನ್ನು ಆಯ್ಕೆ ವಾಡಿ ವಿವಿಧ ಸಮಿತಿಗಳನ್ನು ರಚಿಸಲಾಯಿತು.
ದೇವಸ್ಥಾನ ಸಮಿತಿಯವರು, ಗ್ರಾಮಸ್ಥರು ಆಗಮಿಸಿದ್ದರು. ದಯಾನಂದ ಭಟ್ ಸ್ವಾಗತಿಸಿದರು. ಕುಶಲ ಪೂಜಾರಿ ವಂದಿಸಿದರು.