ಜಿಲ್ಲೆ

ಬೀದಿನಾಯಿ ಕಚ್ಚಿ ಬಾಲಕನಿಗೆ ಗಾಯ

ಸೌಮ್ಯ ಆರ್

ಸುಳ್ಯ: ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನಿಗೆ ಬೀದಿನಾಯಿ ಕಚ್ಚಿದ ಪರಿಣಾಮ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.

ಕೇರ್ಪಳದ ಲೋಕೇಶ ಎಂಬುವರ ಪುತ್ರ ರೇವಂತ್ ಬೀದಿನಾಯಿ ಕಚ್ಚಿ ಗಾಯಗೊಂಡ ಬಾಲಕ. ಇತ್ತೀಚೆಗೆ ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು ನ.ಪಂ ಆಡಳಿತ ಬೀದಿ ನಾಯಿ ಉಪಟಳಕ್ಕೆ ಕಡಿವಾಣ ಹಾಕಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ. ನ.ಪಂ ಸದಸ್ಯ ರಿಯಾಜ್ ಕಟ್ಟೆಕಾರ್ ಬೀದಿನಾಯಿಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ನ.ಪಂ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ರಿಯಾಜ್ ಆಗ್ರಹಿಸಿದ್ದಾರೆ.