ಆಳ್ವಾಸ್ ಕನ್ನಡ ವಿಭಾಗದ ಉಪನ್ಯಾಸಕ ಹರೀಶ್ ಟಿ.ಜಿ. ಉದ್ದ ಲಂಗದ ಕಾಲೇಜು ದಿನಗಳು ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ಕನ್ನಡ ವಿಭಾಗದ ಉಪನ್ಯಾಸಕ ಹರೀಶ್ ಟಿ.ಜಿ., ಕಾಲೇಜಿನ ಪರಿಕ್ಷಾಂಗ ಕುಲಸಚಿವ ಡಾ. ನಾರಾಯಣ ಶೆಟ್ಟಿ ಮೊದಲಾದವರಿದ್ದರು. 
ಜಿಲ್ಲೆ

ಸಾಹಿತ್ಯ ಓದಿನಿಂದ ಸಂವೇದನಾಶೀಲತೆ ಅನುಭವ ಪ್ರಾಪ್ತಿ: ಪ್ರಾಂಶುಪಾಲ ಡಾ.ಕುರಿಯನ್ ಅಭಿಪ್ರಾಯ

Vinod Kumar

ಮೂಡುಬಿದಿರೆ: ಸಾಹಿತ್ಯ ಕೃತಿಗಳು ಬಿಡುಗಡೆಗೊಂಡು ವಿದ್ಯಾರ್ಥಿಗಳು ಸ್ಫೂರ್ತಿಗೊಳಗಾಗುವಂತೆ, ಸಂಶೋಧನಾ ಕೃತಿಗಳು ಬಿಡುಗಡೆಗೊಂಡು ವಿದ್ಯಾರ್ಥಿಗಳು ಪ್ರೇರಣೆಗೊಳಗಾಗಬೇಕು ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಅಭಿಪ್ರಾಯ ಪಟ್ಟರು.

ಆಳ್ವಾಸ್ ಕನ್ನಡ ವಿಭಾಗದ ಉಪನ್ಯಾಸಕ ಹರೀಶ್ ಟಿ.ಜಿ. ವಿರಚಿತ ‘ಉದ್ದ ಲಂಗದ ಕಾಲೇಜು ದಿನಗಳು’ ಕೃತಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿರಲಿ ಜೀವಪರ ಕಾಳಜಿ

ವಿದ್ಯಾರ್ಥಿಗಳು ಜೀವಪರ ಕಾಳಜಿ ಹೊಂದಿ ಸಂವೇದನಾಶೀಲ ನಡೆಯನ್ನು ಅನುಭವಿಸಲು ಸಾಹಿತ್ಯವನ್ನು ಓದಬೇಕು ಎಂದರು.

ಕಾಲೇಜಿನ ಪರಿಕ್ಷಾಂಗ ಕುಲಸಚಿವ ಡಾ.ನಾರಾಯಣ ಶೆಟ್ಟಿ, ಆಡಳಿತ ಕುಲಸಚಿವ ಡಾ.ರವೀಂದ್ರನ್, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಯೋಗೀಶ್ ಕೈರೋಡಿ ಉಪಸ್ಥಿತರಿದ್ದರು. ಬಿಸಿನೆಸ್ ಮ್ಯಾನೇಜ್‌ಮೆಂಟ್ ವಿಭಾಗದ ಉಪನ್ಯಾಸಕ ಮನು ಅವರು ಕೃತಿ ಪರಿಚಯಿಸಿದರು. ಲೇಖಕ ಹರೀಶ್ ಟಿ.ಜಿ. ಸ್ವಾಗತಿಸಿದರು. ವಿದ್ಯಾರ್ಥಿ ಶಶಾಂಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.